Site icon Ullalavani

ಗೋ ಹತ್ಯೆ ನಿಷೇಧ ಅದ್ಯಾದೇಶ: ಎಸ್ಸೆಸ್ಸೆಫ್ ಖಂಡನೆ

ಉಳ್ಳಾಲ ನ್ಯೂಸ್ ನೆಟ್ ವಕ್೯

ಬೆಂಗಳೂರು: ಕೇಂದ್ರ ಸರಕಾರವು ದೇಶಾದ್ಯಂತ ಗೋಹತ್ಯೆ ನಿಷೇಧ ಅದ್ಯಾದೇಶ ಹೊರಡಿಸಿರುವುದನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಖಂಡಿಸಿದ್ದಾರೆ.

ಸರಕಾರದ ಈ ನಡೆಯಿಂದ ದೇಶದ ಬಹುಸಂಖ್ಯಾತ ಬಡವರ್ಗದ ಪೌಷ್ಠಿಕ ಆಹಾರವೊಂದನ್ನು ತಡೆದಂತಾಗಿದೆ.

ಜಾನುವಾರುಗಳ ಮಾರಾಟ ಹಾಗೂ ಖರೀದಿಗೂ ಕಠಿಣ ಶರತ್ತು ವಿಧಿಸಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ರಾಷ್ಟ್ರದಾದ್ಯಂತ ಕೋಮು ದ್ವೇಷಕ್ಕಾಗಿ ನಡೆಯುತ್ತಿರುವ ಅಮಾಯಕರ ಹತ್ಯೆಯ ವಿರುದ್ಧ ಮೌನವಾಗಿರುವ ಆಡಳಿತ ಪಕ್ಷದ ಫಾಶಿಸಂ ಮುಖವು ಬಣ್ಣ ಬಯಲಾಗಿದೆ‌. ಈ ಆದ್ಯಾದೇಶವು ಸಂವಿಧಾನ ವಿರೋಧಿಯಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ಆದುದರಿಂದ ಈ ವಿಷಯದಲ್ಲಿ ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕು ಎಂದು ಎಸ್ಸೆಸ್ಸೆಫ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದೆ.

Exit mobile version