ಉಳ್ಳಾಲ ನ್ಯೂಸ್ ನೆಟ್ ವಕ್೯
ಕೊಣಾಜೆ: ಶ್ರೀ ಮಹಾಕಾಳಿ ಸೇವಾ ಮಂಡಳಿ ಕೊಣಾಜೆ ಕುಂಟಾಲಗುಳಿ ಇದರ ಆಶ್ರಯದಲ್ಲಿ ಕೊಣಾಜೆ ಕುಂಟಲಗುಳಿ ಶ್ರೀ ಮಹಾಕಾಳಿ ವನ ಸಾನಿಧ್ಯದ 2ನೇ ವರ್ಷದ ಪುನರ್ ಪ್ರತಿಷ್ಠಾ ದಿನದ ಅಂಗವಾಗಿ ದುರ್ಗಾ ಪೂಜೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಶ್ರೀ ಮಹಾಕಾಳಿ ಕಟ್ಟೆಯ ಬಳಿ ನಡೆಯಿತು.
ದುರ್ಗಾ ಪೂಜೆ ಕಾರ್ಯಕ್ರಮದ ಬಳಿಕ ಸಮಾಜದಲ್ಲಿ ಶಿಕ್ಷಣ ವೃತ್ತಿಯೊಂದಿಗೆ ಸಮಾಜಸೇವೆಗೈದ ವೆಂಕಪ್ಪ ಮಾಸ್ಟರ್ ಅಸೈಗೋಳಿ, ಶಂಕರಭಟ್ ಕೊಣಾಜೆ ಹಾಗೂ ಇಸ್ಮಾಯಿಲ್ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು. ಇಸ್ಮಾಯಿಲ್ ಮಾಸ್ಟರ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಸ್ವಗ್ರಹಕ್ಕೆ ತೆರಳಿ ಪದಾಧಿಕಾರಿಗಳು ಸನ್ಮಾನಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಶಂಕರಭಟ್ ಅವರು, ಇಂದು ಆಧುನಿಕ ಕಾಲಘಟ್ಟ ಆಗಿದ್ದರೂ ಯುವ ಪಿಳಿಗೆಯು ಸಮಾಜದ ಶಿಷ್ಠಾಚಾರಗಳನ್ನು ಪಾಲಿಸಿ, ನಮ್ಮ ಸಂಸ್ಕøತಿ ಸಂಪ್ರದಾಯವನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು. ಅಲ್ಲದೆ ಪೋಷಕರು ಕೂಡಾ ತಮ್ಮ ಮಕ್ಕಳಿಗೆ ನಮ್ಮ ಸಂಸ್ಕøತಿಯ ಬಗ್ಗೆ ಮನವರಿಕೆ ಮಾಡುವ ಪ್ರಯತ್ನಗಳನ್ನು ಮಾಡಬೇಕೆಂದರು.
ನಿವೃತ್ತ ಶಿಕ್ಷಕ ವೆಂಕಪ್ಪ ಮಾಸ್ಟರ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಶಿಕ್ಷಣ ಕ್ಷೇತ್ರವು ಇಂದು ಬದಲಾಗಿದ್ದು, ಬದಲಾವಣೆಗೆ ತಕ್ಕಂತೆ ವಿದ್ಯಾರ್ಥಿಗಳು ಆಧುನಿಕ ಸಂಸ್ಕøತಿಗೆ ಮಾರು ಹೋಗದೆ ಗುರುಹಿರಿಯರಿಗೆ ಗೌರವನ್ನು ತೋರಿ ಸಮಾಜದ ಏಳಿಗೆಗಾಗಿ ಪ್ರಯತ್ನಿಸಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಮಹಾಕಾಳೀ ಸೇವಾ ಮಂಡಳಿ, ಮಹಾಕಾಳಿ ಮಿತ್ರಮಂಡಳಿ ಹಾಗೂ ಮಾತೃ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು.