Site icon Ullalavani

ಮೀನುಗಾರಿಕಾ ಬೋಟ್ ಮುಳುಗಡೆ: ಹತ್ತು ಮಂದಿಯ ರಕ್ಷಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮಂಗಳೂರು:ಆಳಸಮುದ್ರ ಮೀನುಗಾರಿಕೆಗೆ  ತೆರಳಿದ್ದ ಗಿಲ್ನೆಟ್ ಬೋಟ್ ಮರಳು ದಿಬ್ಬಕ್ಕೆ ಢಿಕ್ಕಿ ಹೊಡೆದಿದ್ದು, ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟಿನಲ್ಲಿದ್ದ 10 ಮಂದಿ ಮೀನುಗಾರರನ್ನು ಇನ್ನೊಂದು ಮೀನುಗಾರಿಕಾ ಬೋಟಿನವರು ರಕ್ಷಿಸಿರುವ ಘಟನೆ ಧಕ್ಕೆ ಸಮೀಪದ ಅಳಿವೆಬಾಗಿಲು ಸಮೀಪ ಬುಧವಾರ ಸಂಜೆ ವೇಳೆ ಸಂಭವಿಸಿದೆ.

ಲೋಕನಾಥ ಬೋಳಾರ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ಕೆಲ ದಿನಗಳ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಬುಧವಾರ ಸಂಜೆ ಮಂಗಳೂರಿನ ಧಕ್ಕೆಗೆ ವಾಪಸ್ಸಾಗುವ ಸಂದರ್ಭ   ಅಳಿವೆಬಾಗಿಲು ಸಮೀಪ ಮರಳು ದಿಬ್ಬಕ್ಕೆ ಬಡಿದಿದೆ. ಪರಿಣಾಮ ಬೋಟ್ ಒಡೆದು ಮುಳುಗಲು ಆರಂಭವಾಗಿತ್ತು. ಈ ವೇಳೆ ಅದರಲ್ಲಿದ್ದ 10 ಮಂದಿ ಮೀನುಗಾರರು ರಕ್ಷಣೆ ಯಾಚಿಸುತ್ತಿದ್ದ ಸಂದಭ9 ಮೀನುಗಾರಿಕೆಯಿಂದ ವಾಪಸ್ಸಾಗುತ್ತಿದ್ದ ಇನ್ನೊಂದು ಬೋಟಿನವರು ಅಲ್ಲಿದ್ದ 10 ಮಂದಿಯನ್ನೂ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಘಟನೆಯಿಂದ ಬೋಟ್ ಮಾಲೀಕರಿಗೆ ರೂ. 70 ಲಕ್ಷ ನಷ್ಟ ಉಂಟಾಗಿದೆ. ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Exit mobile version