Site icon Ullalavani

ಪುಂಡಿಕಾಯಿ ಕೊಡಂಚಿಲ್ ನೂತನ ರಸ್ತೆ ಕಾಮಗಾರಿಗೆ ಚಾಲನೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ನರಿಂಗಾನ: ನರಿಂಗಾನ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರ ಪುಂಡಿಕಾಯಿ, ಕೊಡಂಚಿಲ್‍ನಿಂದ ಕಲ್ಮಂಜ ಸಂಪರ್ಕಿಸುವ ನೂತನ ರಸ್ತೆ ನಿರ್ಮಾಣಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಸ್ಥಳೀಯ ಹಿರಿಯರಾದ ಕರುಣಾಕರ್ ಶೆಟ್ಟಿ ಪುಂಡಿಕಾಯಿ ಚಾಲನೆ ನೀಡಿದರು.

ನರಿಂಗಾನ ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ಲಾ ಕೊಡಂಚಿಲ್ ಮಾತನಾಡಿ ನೂತನ ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ತಮ್ಮ ಮೌಲ್ಯಯುತ ಜಮೀನು ನೀಡಿದ್ದರಿಂದ ರಸ್ತೆ ನಿರ್ಮಾಣ ಕಾರ್ಯ ಸಹಕಾರಿಯಾಗಲಿದ್ದು, ವಿದ್ಯಾನಗರ ಪುಂಡಿಕಾಯಿ, ಕೊಡಂಚಿಲ್ ನಾಗರಿಕರು ಕಲ್ಮಂಜ ತೌಡುಗೋಳಿ ಪ್ರದೇಶಕ್ಕೆ ಬರಬೇಕಾದರೆ 7.ಕಿ.ಮೀ ಬೇಕಾಗಿತ್ತು. ನೂತನ ಸಂಪರ್ಕ ರಸ್ತೆ ನಿರ್ಮಾಣವಾದರೆ ಕೇವಲ 1ಕಿ.ಮೀ. ದೂರ ಕ್ರಮಿಸಲು ಸಾಧ್ಯವಿದ್ದು, ನೂತನ ರಸ್ತೆ ನಿರ್ಮಾಣಕ್ಕೆ ಸ್ಥಳೀಯರೇ ಹಣ ನೀಡುವುದರಿಂದ ಊರಿನ ಜನರ ಶ್ರಮ ಈ ರಸ್ತೆಯಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಕಾಶ್ ಶೆಟ್ಟಿ ಮರಿಕ್ಕಳ, ಇದ್ದೀನ್‍ಕುಂಞ ಕೊಡಂಚಿಲ್, ಸತ್ಯನಾರಾಯಣ ಭಟ್, ಇದ್ದೀನ್ ಕುಂಞ ಪುಂಡಿಕಾಯಿ, ಅಶ್ರಫ್ ಪುಂಡಿಕಾಯಿ, ರಾಜೇಶ್, ಹಸನ್ ಕುಂಞ ಹೂವೆದಪದವು, ರಮೇಶ್ ಬೆದ್ರಳಿಕೆ, ಅಬ್ಬಾಸ್ ಕೊಡಂಚಿಲ್, ಮುಹಮ್ಮದ್ ಮದನಿ ಪುಂಡಿಕಾಯಿ, ಅಬ್ಬಾಸ್ ಸಖಾಫಿ ಕೊಡಂಚಿಲ್, ಚಂದ್ರಶೇಕರ್ ಶೆಟ್ಟಿ ಮರಿಕ್ಕಳ, ಇಸ್ಮಾಯಿಲ್ ಕೊಡಂಚಿಲ್ ಉಪಸ್ಥಿತರಿದ್ದರು.

Exit mobile version