Site icon Ullalavani

ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಇದರ ಆಶ್ರಯದಲ್ಲಿ 5ನೇ ವರ್ಷದ ಉಚಿತ ಪುಸ್ತಕ ವಿತರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೊಣಾಜೆ: ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಅಣ್ಣೆರೆಪಾಲು ಕೊಣಾಜೆ ಇದರ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ 5ನೇ ವರ್ಷದ  ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾ.ಜ.ಪಾ ಕೊಣಾಜೆ ಗ್ರಾಮ ಸಮಿತಿ ಅಧ್ಯಕ್ಷ ಸನತ್ ರೈ ಕಕ್ಕೆಮಜಲು, ಸಮಿತಿಯ ಮಾರ್ಗದರ್ಶಕರೂ ಶ್ರೀ ರಾಮಕೃಷ್ಣ ಪ್ರೌಡಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರ ರೈ ಹರೇಕಳ, ಶ್ರೀ ದುರ್ಗಾ ಪ್ರಿಂಟರ್ಸ್ ಗುರುಮೇರು ಇದರ ಮಾಲಕರಾದ ಶ್ರೀಮತಿ ತುಳಸಿ ಗುರುಮೇರು ಮುಖ್ಯ ಅತಿಥಿಗಳಾಗಿದ್ದರು.

ಶ್ರೀ ದುರ್ಗಾ ಪರಮೇಶ್ವರೀ ಸೇವಾ ಸಮಿತಿಯ ಅಧ್ಯಕ್ಷರಾದ ಚಂದಯ್ಯ ಗೌಡ ಅಣ್ಣೆರೆಪಾಲು, ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಮಾಂಜನೇಯ ವ್ಯಾಯಾಮ ಶಾಲೆ ಗುಡ್ಡುಪಾಲು ಇದರ ಅಧ್ಯಕ್ಷರಾದ ಆನಂದ ಗೌಡ ಅಣ್ಣೆರೆಪಾಲು, ಕೊಣಾಜೆ ಪಂಚಾಯತ್ ಸದಸ್ಯರಾದ ಗೋವಿಂದ ಗೌಡ, ಸಮಿತಿಯ ಸದಸ್ಯರಾದ ನರ್ಸು ಗೌಡ, ಯಶವಂತ ಗುರುಮೇರು, ಪರಮೇಶ್ವರ ಗೌಡ, ಪ್ರಶಾಂತ್ ಗುರುಮೇರು, ಶೇಖರ್ ಕೊಪ್ಪಳ ಉಪಸ್ಥಿತರಿದ್ದರು.

ಭವ್ಯಾ ಪುರುಷಕೋಡಿ ಸ್ವಾಗತಿಸಿ ನವೀನ್ ಕೊಪ್ಪಳ ನಿರ್ವಹಿಸಿದರು ಗೋಪಾಲ್ ಅಣ್ಣೆರೆಪಾಲು ವಂದಿಸಿದರು.

Exit mobile version