Site icon Ullalavani

ಗಾಳದ ಕೊಂಕಣಿ ಅಭ್ಯುದಯ ಸಂಘದಿಂದ ಪ್ರತಿಭಾ ಪುರಸ್ಕಾರ ,ಸನ್ಮಾನ,ಪುಸ್ತಕ ವಿತರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ:ಗಾಳದ ಕೊಂಕಣಿ ಅಭ್ಯುದಯ ಸಂಘದ 62 ನೇ ವಾರ್ಷಿಕ ಮಹಾಸಭೆ,ಉಚಿತ ಪುಸ್ತಕ ವಿತರಣೆ , ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕುತ್ತಾರು ಶ್ರೀ ದುರ್ಗಾವಾಹಿನಿ ಮಹಿಳಾ ಮಂಡಳಿ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶ್ಥೀ ಕ್ಷೇತ್ರ ಸೋಮನಾಥ ಉಳಿಯದ ವಠಾರದಲ್ಲಿ  ಸಮುದಾಯ ಭವನ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಎಲ್ಲರ ಸಹಕಾರ ಯಾಚಿಸಿದರು.

ಮುಖ್ಯ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯ್ಕ್ ರವರು ಮಾತನಾಡಿ ಮಕ್ಕಳಿಗೆ ಎಳವೆಯಲ್ಲೆ ಶಿಸ್ತು,ಸಂಸ್ಕಾರ ನೀಡುವ ಕಾರ್ಯಾ ಆಗಬೇಕು,ಶಿಕ್ಷಣಕ್ಕಾಗಿ ಸಂಘ ನೀಡುವ ಪ್ರೋತ್ಸಾಹ ಹಾಗೂ ಸಮುದಾಯದ ಏಳಿಗೆಗೆ ಕೈಗೊಂಡ ಚಟುವಟಿಕೆಯನ್ನು ಶ್ಲಾಘಿಸಿದರು..ಶ್ರೀ ಸೋಮೇಶ್ವರಿ ಸೌ.ಸ.ಸಂಘದ ಅಧ್ಯಕ್ಷ ಉಮಾನಾಥ ನಾಯ್ಕ್ ಉಳ್ಳಾಲ,ಮುಂಬೈ ಸಜ್ಜನ್ ಸೇವಾ ಸಂಘದ ಮಾಜಿ ಅಧ್ಯಕ್ಷ ದೇವದಾಸ ನಾಯ್ಕ್,ಮಾಜಿ ಅಧ್ಯಕ್ಷರುಗಳಾದ ಅರುಣ್ ಕುಮಾರ್ ಕಾಫಿಕಾಡ್,ಯು.ದಯಾನಂದ ನಾಯ್ಕ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಂಘದ ಉಪಾಧ್ಯಕ್ಷ ರಂಜನ್ ಎಂ.ನಾಯ್ಕ್ ,ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷೆ ಹೇಮಾ.ಕೆ.ಮಂಕಿಸ್ಟ್ಯಾಂಡ್ ವೇದಿಕೆಯಲ್ಲಿದ್ದರು.ಇದೇ ವೇಳೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುದೀರ್ಘ 47 ವರ್ಷ ಸೇವೆ ಸಲ್ಲಿಸಿದ ಹಿರಿಯ ಸದಸ್ಯ ಕೊಲ್ಯ ತಿಮ್ಮಪ್ಪ ನಾಯ್ಕ್ ದಂಪತಿಯನ್ನು ಸನ್ಮಾನಿಸಲಾಯಿತು.ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರಾದ ಯೋಗರಾಜ್ ಮಣ್ಣಗುಡ್ಡೆ ಅವರನ್ನು ಗೌರವಿಸಲಾಯಿತು.ಹಾಗೆಯೇ 2015-16 ನೇ ಸಾಲಿನಲ್ಲಿ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಕ್ರಮವಾಗಿ ರಿಧಿ .ಎಸ್.ನಾಯ್ಕ್ ಬಿಜೈ ,ಶಶಾಂಕ್ ಪಂಪ್ ವೆಲ್, ಶರಣ್ ಆರ್.ನಾಯ್ಕ್ , ಆಶೀಕಾ ಕೆ.,ಮನೀಶಾ ನಾಯ್ಕ್, ಶಿವಾನಿ ಎಚ್ .ಸುರತ್ಕಲ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.1ರಿಂದ 10 ನೇ ತರಗತಿ ವರೆಗಿನ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ವಿತರಿಸಲಾಯಿತು.

ಸಂಘದ ಪ್ರ.ಕಾರ್ಯದರ್ಶಿ ಕೋಡಿ ಜಯ ನಾಯ್ಕ್ ಗತವರ್ಷದ ವರದಿ ವಾಚಿಸಿ ಕೊನೆಯಲ್ಲಿ ವಂದಿಸಿದರು.ಜತೆ ಕಾರ್ಯದರ್ಶಿ ಮುರಳೀಧರ ನಾಯ್ಕ್ ಲೆಕ್ಕ ಪತ್ರ ಮಂಡಿಸಿದರು.ಸದಸ್ಯ ವೆಂಕಟೇಶ್ ಬಂಟ್ವಾಳ ನಿರೂಪಿಸಿದರು.

Exit mobile version