Site icon Ullalavani

ಕೃಷ್ಣಗೀತಾ ಪುಸ್ತಕ ಲೋಕಾರ್ಪಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮಂಗಳೂರು:ಮುಂಬಯಿ-ಕರ್ನಾಟಕ ಸಂಘದ ಸಕ್ರಿಯ ಸದಸ್ಯರೂ, ಕಾನೂನು ತಜ್ಞ ಹಾಗೂ ಸಾಹಿತಿ ವಾಸುದೇವ ಕಾಣೆಮಾರ್ ಇವರು ಬರೆದಂತಹ ಶ್ರೀಕೃಷ್ಣ ಗೀತಾ ( ಮೂಲ ಶ್ಲೋಕಗಳ ಭಾಷಾಂತರ ಮತ್ತು ಅನುವಾದ ) ಪುಸ್ತಕವನ್ನು ಮಂಗಳೂರಿನ ಕಾರ್‍ಸ್ಟ್ರೀಟ್ ನ ಕಾಣೆಮಾರ್ ಕೌಂಪೌಂಡಿನ ಸ್ವಗೃಹದಲ್ಲಿ ಭಾನುವಾರ ಬಿಡುಗಡೆಗೊಂಡಿತು.

ಕೆನಡಾದ ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪಿಹೆಚ್ ಡಿ ಪಡೆದುಕೊಂಡಿರುವ ಡಾ. ವಿ. ವಿಠಲ್ ರಾವ್ ಹಾಗೂ ಪ್ರೊ. ಜ್ಯೋತಿ ರಾವ್ ದಂಪತಿ ಪುಸ್ತಕ ಬಿಡುಗಡೆಗೊಳಿಸಿದರು.

ಈ ಸಂದರ್ಭ ಕ್ಯಾನ್ಸರ್ ತಜ್ಞ ಡಾ.ಕೃಷ್ಣಪ್ರಸಾದ್, ಇಎನ್ ಟಿ ಸ್ಪೆಷಲಿಸ್ಟ್ ರಾಘವೇಂದ್ರ ಅರೂರ್, ಮಾನಸಿಕ ತಜ್ಞೆ ಡಾ.ಸುಪ್ರಿಯ ಹೆಗ್ಡೆ, ಜನರಲ್ ಫಿಸಿಷಿಯನ್ ಡಾ.ಆಚಾರ್, ನgರೋಗಿತಜ್ಞ ಡಾ.ದಿವಾಕರ್ ರಾವ್, ಸರ್ಜನ್ ಡಾ.ದಿನೇಶ್ ರಾವ್, ಜಾನಕಿ ಕಾಣೆಮಾರ್ ಮುಖ್ಯ ಅತಿಥಿಗಳಾಗಿದ್ದರು. ಗಣೇಶ್ ರಾವ್ ಸ್ವಾಗತಿಸಿದರು. ಶೋಭಾ. ಜಿ.ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ಕಾಣೆಮಾರ್ ವಂದಿಸಿದರು.

Exit mobile version