Site icon Ullalavani

ದೇರಳಕಟ್ಟೆ: ರೋಗಿ ಮೃತ್ಯು ವೈದ್ಯನ ಅಪಹರಣ


ಉಳ್ಳಾಲ ನ್ಯೂಸ್ ನೆಟ್‍ವರ್ಕ್

ದೇರಳಕಟ್ಟೆ: ಆಸ್ಪತ್ರೆಗೆ ದಾಖಲಿಸಿದ್ದ ರೋಗಿಯೋರ್ವರು ತಡರಾತ್ರಿ ವೇಳೆ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ವೈದ್ಯರೊಬ್ಬರಿಗೆ ಹಲ್ಲೆ ನಡೆಸಿ ಅವರನ್ನು  ಅಪಹರಿಸಿರುವ ಘಟನೆ ಯೆನೆಪೋಯ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ಸೊತ್ತುಗಳಿಗೆ ಹಾನಿಯಾಗಿರುವುದಲ್ಲದೇ  ದಾದಿ ಪ್ಲೋರಿನ್ ಗೂ ಹಲ್ಲೆ ನಡೆಸಿದ್ದಾರೆ

                                                                            

ಅಪಹರಣಕ್ಕೊಳಗಾದ ವೈದ್ಯರನ್ನು ಸರ್ಜನ್ ಆಗಿರುವ ಡಾ.ಅಭಿಜೀತ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಘಟನೆ ವಿವರ:
ಮಂಗಳವಾರ ಸಂಜೆ ವೇಳೆ ಕಿನ್ಯ ಮೂಲದ ಬಾವು(65) ಕಾಲು ನೋವಿಗೆ ಸಂಬಂಧಿಸಿದಂತೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ತಡರಾತ್ರಿ 12.30 ಹೊತ್ತಿಗೆ ತೀವ್ರ ಅಸೌಖ್ಯಕ್ಕೀಡಾದ ಬಾವು ಅವರು ಮೃತಪಟ್ಟಿದ್ದರು. ಇದನ್ನು ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿದ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಅಲ್ಲಿದ್ದ ದಾದಿಗೆ ಹಲ್ಲೆ ನಡೆಸಿ ಅಲ್ಲಿದ್ದ ಸೊತ್ತುಗಳಿಗೆ ಹಾನಿಗೊಳಿಸಿ ಬಳಿಕ ಡಾ.ಅಭಿಜೀತ್ ಶೆಟ್ಟಿಯನ್ನು ಅಪಹರಿಸಿದ್ದಾರೆ. ನಾಲ್ಕನೇ ಮಹಡಿಯಿಂದ ವೈದ್ಯರನ್ನು ಎಳೆದುಕೊಂಡು ಬಂದ ತಂಡ ಅಸ್ಪತ್ರೆಯ ಎದುರುಗಡೆ ನಿಲ್ಲಿಸಿದ್ದ ಎಸ್ ಟೆಂಪೋದಲ್ಲಿ ಅಪಹರಿಸಿದ್ದಾರೆ. ತಂಡ ವೈದ್ಯರನ್ನು ವಾಹನದಲ್ಲಿ ನೇತ್ರಾವತಿ ಸೇತುವೆಯವರೆಗೆ ಕೊಂಡೊಯ್ಯುದು ಇವರನ್ನು ಯೆನೆಪೋಯ ಸೆಕ್ಯೂರಿಟಿ ವಾಹನವು ಕೂಡ ಬೆನ್ನಟ್ಟಿತ್ತು. ಇದನ್ನು ಕಂಡು ತಂಡ ವಾಹನವನ್ನು ತಿರುಗಿಸಿ ಮತ್ತೆ ಉಳ್ಳಾಲ ಠಾಣೆಯತ್ತ ಪ್ರಯಣ ಬೆಳೆಸಿದೆ. ಅದಾಗಲೇ ಘಟನಯ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದ ಆಸ್ಪತ್ರೆಯ ಸಿಬ್ಬಂದಿಯ ಮಾಹಿತಿಯಂತೆ ಉಳ್ಳಾಲ ಪೊಲೀಸರು ಉಳ್ಳಾಲ ಠಾಣೆಯಿಂದ ಸ್ಪಲ್ಪ ದೂರದಲ್ಲಿರುವ ಅಬ್ಬಕ್ಕ ವೃತ್ತದಲ್ಲಿ ಬಳಿ ವಾಹನವನ್ನು ಅಡ್ಡಗಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ತಂಡದಲ್ಲಿದ್ದ ಇಬ್ಬರು ಪರಾರಿಯಾಗಿದ್ದು ಮೂವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಕುರಿತಂತೆ ಎರಡು ಕಡೆಯಿಂದ ದೂರು ದಾಖಲಾಗಿದ್ದು, ಕಿನ್ಯಾ ನಿವಾಸಿಗಳಾದ ಆಸೀಫ್, ನೌಫಲ್, ಉವಲ್ಸ್ ಬಂಧಿತ ಆರೋಪಿಗಳು .

Exit mobile version