Site icon Ullalavani

ಕೋಟೆಕಾರು ಪಾಂಡಿಹಿತ್ಲು ತೆರೆದ ಬಾವಿಗೆ ಚಾಲನೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್ 

ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 40 ಲಕ್ಷ ಅನುದಾನದಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾಗಿದ್ದು, ಮಳೆಗಾಲ ನಂತರ ಕಾಮಗಾರಿ ನಡೆಯಲಿದೆ ಎಂದು ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊಳ್ಳೆಂಜೀರು ಅಭಿಪ್ರಾಯಪಟ್ಟರು.

ಅವರು ಕೋಟೆಕಾರು ಪಟ್ಟಣ ಪಂಚಾಯಿತಿಯ 14 ನೇ ಹಣಕಾಸಿನ 2016-17 ನೇ ಯೋಜನೆಯಡಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಯೋಜನೆಯಲ್ಲಿ ಪಾಂಡಿಹಿತ್ಲು ಎಂಬಲ್ಲಿ ನಿರ್ಮಿಸಲಾದ ತೆರೆದ ಬಾವಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಪಾಂಡಿಹಿತ್ಲು ಎಂಬಲ್ಲಿ ವರ್ಷಗಳಿಂದ ಜನರಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತೊಂದರೆಯಿದ್ದು, ಇದನ್ನು ಮನಗಂಡು ಪಂಚಾಯಿತಿ ರೂ. 5 ಲಕ್ಷ ಬಾವಿ ತೆಗೆಯಲು ಮತ್ತು ರೂ. 3 ಲಕ್ಷ ಪೈಪ್ ಅಳವಡಿಸಲು ಒಟ್ಟು ರೂ. 8 ಲಕ್ಷದ ಅನುದಾನವನ್ನು ಬಿಡುಗಡೆಗೊಳಿಸಿ ಸುಸಜ್ಜಿತ ಬಾವಿಯನ್ನು ನಿರ್ಮಿಸಲಾಗಿದೆ. ಇದರಿಂದ ಈ ಭಾಗದ ಜನರಿಗೆ ಕುಡಿಯುವ ನೀರಿಗೆ ಶಾಶ್ವತ ಯೋಜನೆಯನ್ನು ರೂಪಿಸಲಾಗಿದೆ. ಕೋಟೆಕಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರೂ. 40 ಲಕ್ಷ ಅನುದಾನದಲ್ಲಿ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು ಎಂದರು.

ಈ ಸಂದರ್ಭ ಕೋಟೆಕಾರು ಪಂಚಾಯಿತಿ ಸದಸ್ಯೆ ಜಯಶ್ರೀ ಪ್ರಫುಲ್ಲಾ ದಾಸ್, ಕೋಟೆಕಾರು ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ್ ಕನೀರುತೋಟ, ಗುತ್ತಿಗೆದಾರ ಮಾಧವ ಸಿ.ಹೆಚ್, ಸ್ಥಳದಾನಿಗಳಾದ ಯಾದವ ಹಾಗೂ ಬಾಲಕೃಷ್ಣ, ಆನಂದ್, ಬಿ.ಎನ್ ಟೈಲರ್, ಜಯಾನಂದ್, ರಮೇಶ್, ಪ್ರಫುಲ್ಲಾ ದಾಸ್, ಕುಶಾಲಾಕ್ಷ, ಹರೀಶ್ ಕನೀರುತೋಟ, ಸೋಮೇಶ್ವರ ಪಂ.ಸದಸ್ಯ ನವೀನ್ ಕನೀರುತೋಟ, ಜೀವನ್, ಸಂದೀಪ್, ಭರತ್, ಮೋಹನ್ ಮಾಡೂರು, ಬ್ರಿಜೇಶ್, ಸುಂದರ್, ರಮ್ಯಾ, ಜಲಜ, ಗೋಪಾಲ, ಸೂರಜ್, ವಿನುತ, ಸವಿತಾ, ಮಾನ್ಸಿ, ನಿಖಿತಾ, ನಿತೇಶ್, ಶ್ವೇತಾ, ಶಿಲ್ಪಾ ಚಂದ್ರಹಾಸ್, ಪದ್ಮಾವತಿ, ರೇವತಿ ಉಪಸ್ಥಿತರಿದ್ದರು.

ಇದೇ ವೇಳೆ ಬಾವಿ ನಿರ್ಮಾಣಕ್ಕೆ ಸಹಕರಿಸಿದ ಶೇಖರ್ ಕನೀರುತೋಟ, ಪಂ.ಸದಸ್ಯೆ ಜಯಶ್ರೀ ಪ್ರಫುಲ್ಲಾದಾಸ್, ಸ್ಥಳದಾನಿಗಳಾದ ದಿ| ಶೇಸು ಪೂಜಾರಿ ಮತ್ತು ದಿ| ಜಾನಕಿ ಪಾಂಡಿಹಿತ್ಲು ಎಂಬವರ ಮಕ್ಕಳಾದ ಬಾಲಕೃಷ್ಣ ಮತ್ತು ಯಾದವ್ ಪೂಜಾರಿ ಎಂಬವರನ್ನು ಸನ್ಮಾನಿಸಿ ಗೌರವಿಸಲಾಯಿತು.

Exit mobile version