ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಅಳೇಕಲ: “ಸುನ್ನೀ ಸೆಂಟರ್” ಅಳೇಕಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ವಿ ಎಸ್,
ಜಂಟಿ ಆಶ್ರಯದಲ್ಲಿ ದಿನಾಂಕ 12/5, ಶುಕ್ರವಾರಂದು ಇಶಾ ನಮಾಝಿನ ಬಳಿಕ “ರಮಝಾನ್ ಕಾರ್ಯಕ್ರಮಗಳ ಪೂರ್ವ ಸಿದ್ಧತಾ ಸಭೆ”ಯು ಅಳೇಕಲದ “ಬಿಗ್ ಹೌಸ್” ನಲ್ಲಿ ನಡೆಯಿತು.
ಪ್ರತೀ ವರ್ಷವೂ ರಮಝಾನ್ ತಿಂಗಳಲ್ಲಿ ಆಚರಿಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳನ್ನು ಈ ವರ್ಷವೂ ಬಹಳ ವಿಜ್ರಂಭಭಣೆ ಯಿಂದ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಆ ಪೈಕಿ ಅಳೇಕಲ ಅಚ್ಚಿ ಸಾಹಿಬ್ (ಖ.ಸಿ) ದರ್ಗಾ ಝಿಯಾರತ್, ಮಸೀದಿ ಮತ್ತು ಪರಿಸರ ಸ್ವಚ್ಛತಾ ಕಾರ್ಯಕ್ರಮ, ರಮಝಾನ್ ಕಿಟ್ ವಿತರಣೆ, ಮಹಿಳಾ ತರಗತಿ, ಬದ್ರ್ ಅನುಸ್ಮರಣೆ, ಇಫ್ತಾರ್ ಮೀಟ್, ಇಱ್ತಿಕಾಫ್ ಮತ್ತು ಖತಮುಲ್ ಕುರ್‍ಆನ್, ಈದ್ ಕಿಟ್ ವಿತರಣೆ, ಕುರ್‍ಆನ್ ಸ್ಪರ್ಧೆ, ಝಿಯಾರತ್ ಟೂರ್ ಸಹಿತ ಹಲವಾರು ಕಾರ್ಯಕ್ರಮಗಳ ಪೂರ್ವ ತಯಾರಿ ಮಾಡಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಲು ಸಮಿತಿಗಳನ್ನು ರಚಿಸಲಾಯಿತು, ಸಮಿತಿಯ ಚೇರ್ಮಾನ್ ಆಗಿ ಸೆಯ್ಯದ್ ಜಲಾಲ್ ತಂಙಳ್, ವೈಸ್ ಚೇರ್ಮಾನ್ಗಳಾಗಿ ಪುತುಬಾವ ಹಾಜಿ ಮತ್ತು ಮುಹಮ್ಮದ್ ರಿಯಾಝ್, ಕನ್ವೀನರ್ ಆಗಿ ಫಾಝಿಲ್ ಅಳೇಕಲ, ವೈಸ್ ಕನ್ವೀನರ್ ಆಗಿ ಜವಾದ್, ಕೋಶಾದಿಕಾರಿ ಯಾಗಿ ಶರೀಫ್ ಸಾದುಹಿತ್ಲು ಅವರನ್ನು ಆಯ್ಕೆ ಮಾಡಲಾಯಿತು. ಫಾಝಿಲ್ ಅಳೇಕಲ ಸ್ವಾಗತಿಸಿ ಆರಿಫ್ ಧನ್ಯವಾದಗೈದರು.