Site icon Ullalavani

ತೊಕ್ಕೊಟ್ಟು ಟು ಕುಂಪಲ: ಬಿಜೆಪಿಯಿಂದ ವಿಜಯ ಸಂಕಲ್ಪ ರ್ಯಾಲಿ

ಉಳ್ಳಾಲ ನ್ಯೂಸ್ ನೆಟ್‍ವರ್ಕ್ 

ತೊಕ್ಕೊಟ್ಟು: ಬಿಜೆಪಿ ಕುಂಪಲ ಬೂತ್ ಸಮಿತಿ ವತಿಯಿಂದ ಪಂ|| ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ವರ್ಷ ಪ್ರಯುಕ್ತ ತೊಕ್ಕೊಟ್ಟುವಿನಿಂದ ಕುಂಪಲದವರೆಗೆ ವಿಜಯ ಸಂಕಲ್ಪ ರ್ಯಾಲಿ ಭಾನುವಾರ ನಡೆಯಿತು.

ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಧ್ವಜ ಹಸ್ತಾಂತರಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭ
ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ದಕ್ಷಿಣ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ್ ಅಡ್ಯಂತಾಯ, ಜಿ.ಪಂ ಮಾಜಿ ಸದಸ್ಯ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಮೀತಾ ಶ್ಯಾಮ್, ಬಿಜೆಪಿ ದ.ಕ. ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಜಿ ಡಾ| ಕೆ. ಎ. ಮುನೀರ್ ಬಾವಾ, ಜೀವನ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು ಮುಂತಾದವರು ಉಪಸ್ಥಿತರಿದ್ದರು.

Exit mobile version