ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಯುವಮಿತ್ರರು ಕುಂಪಲ ಇದರ ಆಶ್ರಯದಲ್ಲಿ ದ.ಕ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ 70 ಕೆ.ಜಿ ವಿಭಾಗದ ಪ್ರೋ ಮಾದರಿಯ ಮ್ಯಾಟ್ ಕಬ್ಬಡ್ಡಿ -2017 ಕ್ಕೆ ಕುಂಪಲದ ಮೂರುಕಟ್ಟದಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್ ಉದ್ಘಾಟಿಸಿದರು. ಶ್ರೀ ಮಾರುತಿ ಮಠ ಗುರುನಗರದ ಬಾಲಯೋಗಿ ಶ್ರೀ ಅಮೃತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಬ್ಬಡ್ಡಿ ಅಮೆಚೂರು ಅಸೋಸಿಷಯೇಷನ್ನಿನ ಉಪಾಧ್ಯಕ್ಷರಾದ ಕೆ.ಟಿ. ಸುವರ್ಣ ವಹಸಿದ್ದರು. ಉದ್ಯಮಿ ಸತೀಶ್ ಕರ್ಕೇರ ಟ್ರೋಫಿ ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಹಿಂದು ಯುವಸೇನೆ ಕೇಂದ್ರೀಯ ಮಂಡಳಿ ಸದಸ್ಯ ಯಶೋಧರ್ ಚೌಟ, ಗೌರವಾಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ, ಹರೀಶ್ ಕಾಮತ್, ಆರ್ಯ ಯಾನೆ ಮರಾಠ ಸಮಾಜದ ಅಧ್ಯಕ್ಷ ದೇವೋಜಿ ರಾವ್, ಉದ್ಯಮಿ ಹರೀಶ್ ಶೆಟ್ಟಿ ಜೆಪ್ಪು, ಪ್ರಗತಿಪರ ಕೃಷಿಕ ಉಮೇಶ್ ಗಾಂಭೀರ್, ಗೋಕರ್ಣನಾಥ ಬ್ಯಾಂಕಿನ ಹರೀಶ್ ಮುಂಡೋಳಿ, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ರಾಕೇಶ್ ಬೈಪಾಸ್, ಶ್ರೀ ಕೃಷ್ಣ ಜನಮಾಷ್ಠಮಿ ಉತ್ಸವ ಸಮಿತಿ ಕಾರ್ಯದರ್ಶಿ ಹರೀಶ್ ಮೂರುಕಟ್ಟ, ಯುವಮಿತ್ರರು ಕುಂಪಲದ ವ್ಯವಸ್ಥಾಪಕ ಪ್ರಶಾಂತ್ ಕುಂಪಲ, ಅಶೋಕ್ .ಕೆ, ಪುರುಷೋತ್ತಮ ರಾವ್, ದೀಪಕ್ ಮಿತ್ರನಗರ, ವಿನೋದ್ ಗಟ್ಟಿ, ಸಂಜೀವ ಕುಲಾಲ್, ರವೀಂದ್ರ ಕುಂಪಲ, ಚಂದ್ರಹಾಸ್ ಮೂರುಕಟ್ಟ, ಶಿವಾನಂದ ಟೈಲರ್, ಲಕ್ಷ್ಮಣ್ ಕಿರೋಡಿಯನ್ ಉಪಸ್ಥಿತರಿದ್ದರು.
ಕುಂಪಲ ಬಾಲಕೃಷ್ಣ ಮಂದಿರದ ಗೌರವಾಧ್ಯಕ್ಷ ಸತೀಶ್ ಕುಂಪಲ ಪ್ರಸ್ತಾವನೆಗೈದರು. ಕಬ್ಬಡ್ಡಿ ಸಂಘಟಕ ಪ್ರವೀಣ್. ಯಸ್.ಕುಂಪಲ ಸ್ವಾಗತಿಸಿದರು.
ದಿವಾಕರ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು.