ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮಂಜೇಶ್ವರ: ಇಲ್ಲಿನ ತಾಲೂಕು ಬಸ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ ನಿನ್ನೆ ಹೊಸಂಗಡಿಯ ಹಿಲ್‍ಸೈಡ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಬಿ. ಸುಬ್ಬಣ್ನ ಆಳ್ವ ಮೀಯಪದವು ವಹಿಸಿದ್ದರು.
ಸಭೆಯನ್ನು ಕಾಸರಗೋಡು ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಗಿರೀಶ್ ಕೆ. ಉದ್ಘಾಟಿಸಿದರು.
ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್ ಉಪಾಧ್ಯಕ್ಷ ಪಿ.ಎ. ಮೊಹಮ್ಮದ್ ಕುಂಞï, ಕಾಸರಗೋಡು ತಾಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷ ಎನ್.ಎಂ. ಹಸೈನಾರ್, ಉಪಾಧ್ಯಕ್ಷ, ಎಂ.ಎ ಅಬ್ದುಲ್ಲ ಕಾಸರಗೋಡು ತಾಲೂಕು ಬಸ್ ಮಾಲಕರ ಸಹಕಾರಿ ಸಂಘದ ಕಾರ್ಯದರ್ಶಿ ತಂಬನ್ ನಾಯರ್ ಕೆ.ಕೆ ಉಪಸ್ಥಿತರಿದ್ದು ಮಾತನಾಡಿದರು. ವಾರ್ಷಿಕ ವರದಿ ಲೆಕ್ಕ ಪತ್ರವನ್ನು ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಭಟ್ ಅರಂತಾಡಿ ವಾಚಿಸಿದರು
ಬಳಿಕ 2017 – 2020ರವರೆಗಿನ ಸಾಲಿನ ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಪಧಾದಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷರಾಗಿ ಬಿ. ಸುಬ್ಬಣ್ಣ ಆಳ್ವ ಮೀಯಪದವು, ಪ್ರಧಾನ ಕಾರ್ಯದರ್ಶಿಯಾಗಿ:- ತಿಮ್ಮಪ್ಪ ಭಟ್ ಅರಂತಾಡಿ, ಕೋಶಾಧಿಕಾರಿಯಾಗಿ :- ಎಚ್. ಉಮೇಶ್ ಶೆಟ್ಟಿ ಹೊಸಬೆಟ್ಟು ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ:- ಬಿ.ಕೆ. ಮೊಹಮ್ಮದ್, ಎಸ್,ಕೆ ಹಮೀದ್, ಜತೆ ಕಾರ್ಯದರ್ಶಿಯಾಗಿ:- ಯು. ರಾಜೇಶ್ ಉದ್ಯಾವರ, ಧನ್‍ರಾಜ್ ಶುಭಾಶ್ ನಗರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ:- ಎ.ಗೋಪಾಲಕೃಷ್ಣ ಭಟ್ ಅರಂತಾಡಿ, ಮೊಹಮ್ಮದ್ ಜನಶ್ರೀ, ಮಾರಪ್ಪ ಶೆಟ್ಟಿ ಪಾವೂರು, ಬಿ.ಎಮ್. ರಾಜೇಶ್ ಹಿಲ್‍ಸೈಡ್ ಹೊಸಂಗಡಿ, ಸುನೀಲ್ ತಲಪಾಡಿ, ಯಶವಂತ ಹೊಸಬೆಟ್ಟು, ಮೊಹಮ್ಮದ್. ಪಿ.ಎ ಪೈವಳಿಕೆ, ಸದಾಶಿವ. ಯು ವರ್ಕಾಡಿ, ಜಯರಾಮ ಶೆಟ್ಟಿ ಕುಕ್ಕಾರ್ ಆಯ್ಕೆಯಾದರು.
ಪಧಾಧಿಕಾರಿಗಳ ಚುನಾವಣೆಯಲ್ಲಿ ಕಾಸರಗೋಡು ತಾಲೂಕು ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಸಿ.ಎ. ಮೊಹಮ್ಮದ್ ಕುಂಞ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಸಭೆಯಲ್ಲಿ:- ಮಂಜೇಶ್ವರದಲ್ಲಿ ಜಾಯಿಂಟ್ ಆರ್.ಟಿ.ಓ ಕಛೇರಿಯನ್ನು ಸ್ಥಾಪಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ, ಮಂತ್ರಿ ಮಹೋದಯರಿಗೆ ಮನವಿ ನೀಡಲು ನಿರ್ಧರಿಸಲಾಯಿತು. ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ:- ತಿಮ್ಮಪ್ಪ ಭಟ್ ಅರಂತಾಡಿ ಸ್ವಾಗತಿಸಿ, ಜತೆ ಕಾರ್ಯದರ್ಶಿ :- ಯು. ರಾಜೇಶ್ ಉದ್ಯಾವರ ವಂದಿಸಿದರು.