ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮಂಗಳೂರು : ಮೂರರ ಹರೆಯದ ಬಾಲಕಿ ಕಾರಿನ ಒಳಗಡೆಯೇ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಪುತ್ತೂರಿನ ಹಾರಾಡಿ ಶಾಲೆ ಸಮೀಪ ನಡೆದಿದೆ.
ಉಳ್ಳಾಲದ ಇಮ್ರಾನ್ ಮತ್ತು ಸಂಶೀರಾ ದಂಪತಿ ಪುತ್ರಿ ರೆಹಮತ್ (3) ಸಾವನ್ನಪ್ಪಿದ ಬಾಲಕಿ. ಅಜ್ಜಿ ಮನೆಗೆಂದು ತಾಯಿ ಜತೆಗೆ ಬಂದಿದ್ದ ಬಾಲಕಿ ಹಾಗೂ ಮನೆಯಲ್ಲಿದ್ದ ಇತರೆ ಮಕ್ಕಳನ್ನು ಸಂಶೀರಾ ಅವರ ಸಹೋದರ ಕಾರಿನಲ್ಲಿ ಸಂಬಂಧಿಕರ ಮನೆಗೆಂದು ಕರೆದೊಯ್ದಿದ್ದರು. ಅಲ್ಲಿಂದ ವಾಪಸ್ಸಾದ ಬಳಿಕ ಹಾರಾಡಿಯಲ್ಲಿ ಎಲ್ಲ ಮಕ್ಕಳು ಮನಗೆ ತಲುಪಿದ್ದರೆ ಬಾಲಕಿ ಮಾತ್ರ ಬಂದಿರಲಿಲ್ಲ. ಕೂಡಲೇ ಕಾರಿನತ್ತ ಧಾವಿಸಿದ ಮನೆಮಂದಿ ಕಾರೊಳಗಡೆ ಬಾಲಕಿ ಮೃತಪಟ್ಟಿರುವುದು ಗೋಚರಿಸಿದೆ. ಅಸೌಖ್ಯದಿಂದ ಬಾಲಕಿ ಸಾವನ್ನಪ್ಪಿರುವುದಾಗಿ ಮನೆಮಂದಿ ತಿಳಿಸಿದ್ದಾರೆ. ಬಾಲಕಿ ತಂದೆ ವಿದೇಶದಲ್ಲಿದ್ದು, ಅವರು ಊರಿಗೆ ಮರಳಿದ ನಂತರ ಉಳ್ಳಾಲದಲ್ಲಿ ಬಾಲಕಿಯ ಅಂತಿಮ ಸಂಸ್ಕಾರ ನಡೆಯಲಿದೆ.