ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮಂಗಳೂರು: ಕುಡ್ಲ ಎಕ್ಸ್ ಪ್ರೆಸ್ ಗೆ ಗೊಮ್ಮಟೇಶ್ವರ ಎಕ್ಸ್ ಪ್ರೆಸ್ ಎಂದು ಮರುನಾಮಕರಣ ಮಾಡಿರುವುದು ತುಳುನಾಡಿಗೆ ಮಾಡಿದ ಮಲತಾಯಿ ಧೋರಣೆ ಕೂಡಲೇ ಕುಡ್ಲ ಎಕ್ಸ್ ಪ್ರೆಸ್ ಎಂದು ಪುನರ್ ನಾಮಕರಣ ಮಾಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ ಬೆಂಗಳೂರು-ಮಂಗಳೂರು ರೈಲಿನ ಹೆಸರು ಈ ಹಿಂದೆ ಉದ್ಘಾಟನೆ ಆಗುವ ಸಂದರ್ಭದಲ್ಲಿ ಕುಡ್ಲಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತುಳುನಾಡಿಗೆ ಸಣ್ಣ ಮಟ್ಟಿನಲ್ಲಾದರೂ ಮಾನ್ಯತೆ ಸಿಕ್ಕಿತು ಎಂಬ ಅಭಿಮಾನ ನಮ್ಮಲ್ಲಿತ್ತು. ಕೇಂದ್ರ ಸರ್ಕಾರ ತನ್ನ 2014ರ ಭಜೆಟ್‍ನಲ್ಲಿ ಯಶವಂತಪುರ-ಮಂಗಳೂರು ನಡುವೆ ಹೊಸದಾಗಿ ಈ ರೈಲನ್ನು ಘೋಷಿಸಲಾಗಿತ್ತು.
ಈ ರೈಲನ್ನು ತುಳುನಾಡಿನ ಜನರ ಒತ್ತಾಯದ ಮೇರೆಗೆ ಹೊಸ ರೈಲಿನ ಘೋಷಣೆ ಮಾಡಿ ಅದಕ್ಕೆ ಕುಡ್ಲ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿದ್ದರು.ಕಳೆದ ತಿಂಗಳು ರೈಲು ಉದ್ಘಾಟನೆ ವೇಳೆಯೂ ಕುಡ್ಲ ಎಕ್ಸ್‍ಪ್ರೆಸ್ ಎಂದಿದ್ದ ಈ ರೈಲಿಗೆ ಬುಧವಾರದಿಂದ ಅನ್ವಯವಾಗುವಂತೆ ಗೊಮ್ಮಟೇಶ್ವರ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ.ಇದು ತುಳುನಾಡ ಜನರ ಬಗ್ಗೆ ಸರಕಾರದ ಮಲತಾಯಿ ಧೋರಣೆಯಾಗಿದೆ.ಒಮ್ಮೆ ಇಟ್ಟ ಹೆಸರನ್ನು ಯಾವುದೋ ರಾಜಕೀಯ ಹಿತಾಸಕ್ತಿಗಾಗಿ ಬದಲಿಸುವುದು ಅಕ್ಷಮ್ಯ. ಈ ಬಗ್ಗೆ ನಾವು ಸರಕಾರದ ಗಮನ ತರುವಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಿದ್ದೇವೆ. ತಕ್ಷಣವೇ ಕುಡ್ಲ ಎಕ್ಸ್ ಪ್ರೆಸ್ ಎಂದು ಮರು ನಾಮಕರಣ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ತುರವೇ ಕೇಂದ್ರೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಬಟ್ ಕಡಬ, ಕೇಂದ್ರೀಯ ಮಂಡಳಿ ಕೋಶಾಧಿಕಾರಿ ರಶೀದ್ ಜೆಪ್ಪು , ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಧ ಎಂ. ಸಿರಾಜ್ ಅಡ್ಕರೆ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿಕಾ ಜೈನ್,ಕೇಂದ್ರೀಯ ಮಂಡಳಿ ಉಪಾದ್ಯಕ್ಷರಾಧ ಜೆ ಇಬ್ರಾಹಿಂ, ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ಯುವ ಘಟಕದ ಜಿಲ್ಲಾಧ್ಯಕ್ಷರಾದ ಹಿರೀಶ್ ಶೆಟ್ಟಿ , ನೇಮು ಕೊಟ್ಟಾರಿ, ಗಂಗಾದರ್ ಅತ್ತಾವರ್, ಉಮೇಶ್ ಬಂಗೇರ, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.