Site icon Ullalavani

ಠಾಣಾಧಿಕಾರಿಯನ್ನು ವಜಾಗೊಳಿಸಿ ಇಲ್ಲವಾದಲ್ಲಿ ಪ್ರತಿಭಟನೆ ಎದುರಿಸಿ :ಶಾಫಿ ಬೆಳ್ಳಾರೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೊಣಾಜೆ: ಕಾರ್ತಿಕ್ ರಾಜ್ ಪ್ರಕರಣದಲ್ಲಿ ಧೋರಣೆ ಅನುಸರಿಸಿ ಒಂದು ಸಮುದಾಯದ ಯುವಕರ ಮೇಲೆ ದೌರ್ಜನ್ಯ ನಡೆಸಿದ ಕೊಣಾಜೆ ಠಾಣಾಧಿಕಾರಿಯವರ ಮೇಲೆ ಕ್ರಮಕೈಗೊಳ್ಳದೇ ಇದ್ದಲ್ಲಿ, ಜಿಲ್ಲೆಯ ಮುಸ್ಲಿಮರನ್ನು ಸೇರಿಸಿಕೊಂಡು ಮತ್ತೊಮ್ಮೆ ಪೊಲೀಸ್ ಕಮೀಷನರೇಟ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಎಚ್ಚರಿಕೆ ನೀಡಿದ್ದಾರೆ.

ಅವರು ನಾಗರಿಕ ಸಮಿತಿ ಕೊಣಾಜೆ ವಲಯ ಆಶ್ರಯದಲ್ಲಿ ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ತೋರಿದ ಕೊಣಾಜೆ ಠಾಣಾಧಿಕಾರಿ ಅಶೋಕ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕುಟುಂಬದ ರಕ್ಷಣೆ ಮಾಡಿದ ಆರೋಪ ಹಾಗೂ ರಾಜಕೀಯ ನಾಯಕರು ಮಾಹಿತಿ ನೀಡಿದರೂ ತನಿಖೆ ನಡೆಸದೆ ಧೋರಣೆ ಅನುಸರಿಸದ ಕೊಣಾಜೆ ಠಾಣಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕಿದೆ. ಠಾಣಾಧಿಕಾರಿಯಾಗಲೂ ಅನರ್ಹರಾಗಿದ್ದಾರೆ, ರಾತ್ರಿ 2 ಗಂಟೆ ವೇಳೆ ಠಾಣೆಯಿಂದ ಮನೆಗೆ ಹೊರಡುವ ಅಭ್ಯಾಸ ಬೆಳೆಸಿಕೊಂಡಿರುವ ಪೊಲೀಸರು ತಡರಾತ್ರಿಯೇ ಸಮಯ ಸಿಕ್ಕಂತೆ ಮುಸಲ್ಮಾನರ ಮನೆಗಳಿಗೆ ಆಕ್ರಮಣ ನಡೆಸುತ್ತಿದ್ದಾರೆ. ಇದರ ವಿರುದ್ಧ ಚಲೋ ನಡೆಸಬೇಕಾದ ಅನಿವಾರ್ಯತೆಯೂ ಇದೆ. ಶಿಹಾಬ್ ಮಂಜೇಶ್ವರ ಎಂಬವರನ್ನು ಏಳು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿ, ಬಳಿಕ ಸಣ್ಣ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಯಿತು. ಮತ್ತೆ ಆತನನ್ನು ಠಾಣೆಗೆ ಕರೆಸಿ ಬಲವಂತವಾಗಿ ಕಾರ್ತಿಕ್ ರಾಜ್ ಕೊಲೆ ಪ್ರಕರಣವನ್ನು ಒಪ್ಪುವಂತೆ ದೌರ್ಜನ್ಯವನ್ನು ನಡೆಸಲಾಗಿತ್ತು. ಇಂತಹ ಭ್ರಷ್ಟ ಪೊಲೀಸ್ ಅಧಿಕಾರಿಗಳಿಂದ ಇಲಾಖೆಯೇ ತಲೆತಗ್ಗಿಸುವಂತೆ ಆಗಿದೆ.

ಸಮಾಜಘಾತುಕ ಶಕ್ತಿಗಳ ಮೇಲೆ ಕ್ರಮಕೈಗೊಳ್ಳುವ ಮುನ್ನ ಇಂತಹ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಪೊಲೀಸ್ ಇಲಾಖೆಗಿದೆ. ತಡರಾತ್ರಿ ಫಾರುಕ್ ಎಂಬವರ ಮನೆಗೆ ನುಗ್ಗಿದ್ದ ಪೊಲೀಸರು ಬೂಟಿನಿಂದ ಅವರ ತಂದೆಗೆ ಹೊಡೆದಿರುವುದರಿಂದ ಈಗಲೂ ಸ್ಮøತಿಯಿಲ್ಲದೆ ಬದುಕುವಂತಾಗಿದೆ. ಕೊಣಾಜೆ ಠಾಣಾಧಿಕಾರಿ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಬೇಕಿದೆ. ಅವರ ಜತೆಗೆ ಜಿಲ್ಲೆಯ ಸಂಸದ ನಳಿನ್ ಕಟೀಲ್ ಕುಟುಂಬವನ್ನು ಉಪಯೋಗಿಸಿಕೊಂಡು ಜಿಲ್ಲೆಗೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಈ ಮೂಲಕ ಸಂಸದರು ಕೂಡಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನುವ ಸಂಶಯವೂ ವ್ಯಕ್ತವಾಗುತ್ತಿದೆ. ಅಹಮ್ಮದ್ ಖುರೈಷಿಯನ್ನು ಕೂಡಾ ಕಾರ್ತಿಕ್ ರಾಜ್ ಪ್ರಕರಣವನ್ನು ಒಪ್ಪುವಂತೆ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ಅವರು ಎರಡು ಕಿಡ್ನಿಯನ್ನು ಕಳೆದುಕೊಳ್ಳುವಂತಾಯಿತು. ಇದರ ವಿರುದ್ಧ ಹೋರಾಡಿವರ ಮೇಲೂ ದೌರ್ಜನ್ಯ ನಡೆಯಿತು. ಮಡಿಕೇರಿಯಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟ ಉತ್ತಪ್ಪ ಹಾಗೂ ಶಿವಮೊಗ್ಗದಲ್ಲಿ ಕುಟುಂಬ ಕಲಹದಲ್ಲಿ ಮೃತಪಟ್ಟ ಬಿಜೆಪಿ ನಾಯಕನ ಪ್ರಕರಣದಲ್ಲಿಯೂ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿತ್ತು. ಹಿಂದು ಸಂಘಟನೆಯವರು ನಡೆಸಿದ ಜನಪ್ರತಿನಿಧಿ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣವನ್ನು ಭೂಗತ ನಂಟು ಕಟ್ಟಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಎಸ್ ಕೆ ಎಸ್ ಎಂ ನ ರಾಜ್ಯ ಸಮಿತಿ ಮುಖಂಡ ಇಸ್ಮಾಯಿಲ್ ಶಾಫಿ ಮಾತನಾಡಿ ಮರಳು ಲಾರಿಗಳ ಮೇಲೆಯೇ ಪ್ರಕರಣ ದಾಖಲಿಸಿಕೊಂಡು ಠಾಣೆಯೆದರು ಮರಳು ರಾಶಿಯನ್ನು ಹಾಕಿರುವ ಕೊಣಾಜೆ ಠಾಣಾಧಿಕಾರಿ ಅದರಡಿ ಎಷ್ಟು ಪ್ರಕರಣವನ್ನು ಅಡಗಿಸಿದ್ದಾರೆ ಅನ್ನುವುದರ ವಿಚಾರಣೆ ನಡೆಯಬೇಕಿದೆ. ಠಾಣಾಧಿಕಾರಿಯ ಬದಲು ಮಂಗಳೂರಿನ ಶ್ವಾನದಳವನ್ನು ಸಾಕುವ ಕೆಲಸಕ್ಕೆ ಠಾಣಾದಿಕಾರಿ ಅಶೋಕ್ ಅವರನ್ನು ನೇಮಿಸಬೇಕಿದೆ ಎಂದು ಲೇವಡಿ ಮಾಡಿದ ಅವರು ನ್ಯಾಯದ ಪರ ಇರುವ ಶ್ರೀಕಲಾ ವಿರುದ್ಧ ಎಫ್ ಐಆರ್ ದಾಖಲಿಸಿ ಅಮಾನತುಗೊಳಿಸುವಲ್ಲಿಯೂ ಠಾಣಾಧಿಕಾರಿ ಅಶೋಕ್ ಪಾತ್ರವಿದೆ ಎಂದು ಆರೋಪಿಸಿದರು.

ಕೋಮು ಸೌಹಾರ್ದ ವೇದಿಕೆಯ ಇಸ್ಮತ್ ಫಜೀರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಾಫ ಮಲಾರ್, ಪಿಎಫ್ ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಎಸ್ ಡಿಪಿಐ ಅತ್ತಾವುಲ್ಲ ಜೋಕಟ್ಟೆ, ಇಕ್ಬಾಲ್ ಬೆಳ್ಳಾರೆ, ಎಸ್ ಡಿಪಿಐ ಉಳ್ಳಾಲದ ಹಾರಿಸ್ ಮಲಾರ್, ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯ, ಪಿಎಫ್ ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್, ಎ.ಕೆ, ಗಡಿನಾಡು ರಕ್ಷಣಾ ವೇದಿಕೆಯ ಸಿದ್ಧೀಖ್ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು.

ನಪುಂಸಕ ಸಂಸದ !
ಕೊಲೆ ಪ್ರಕರಣದಲ್ಲಿನ ನೈಜ ಆರೋಪಿಗಳ ವಿಚಾರ ತೆಗೆಯದೆ, ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿದ ಸಂಸದ ನಳಿನ್ ಕಟೀಲ್ ನಪುಂಸಕರಾಗಿದ್ದಾರೆ. ಇದೀಗ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕಾವ್ಯಾ, ಗೌತಂ, ಗೌರವ್ ಯಾವ ಬ್ಯಾರಿಗೆ ಹುಟ್ಟಿದವರು ಎಂದು ಸಂಬೋಧಿಸಿದ ಕೋಮು ಸೌಹಾರ್ದ ವೇದಿಕೆಯ ಇಸ್ಮತ್ ಪಜೀರ್, ಸತ್ಯವನ್ನು ಮುಚ್ಚಿಟ್ಟು ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ಯಶಸ್ವಿಯಾಗಿಲ್ಲ. ಮುಸ್ಲಿಮರ ಪ್ರತಿಭಟನೆಯ ಇದು ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ನ್ಯಾಯದ ಪರ ಹೋರಾಟ ನಡೆಸುವುದಾಗಿ ಹೇಳಿದರು.

Exit mobile version