Site icon Ullalavani

ಪಜೀರು: ಕಾರ್ತಿಕ್‍ರಾಜ್ ಮನೆಗೆ ಗೃಹಸಚಿವರ ಭೇಟಿ

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್

ಕೊಣಾಜೆ: ಕಳೆದ ಏಳು ತಿಂಗಳ ಹಿಂದೆ ಗಣೇಶಮಹಲ್ ಸಮೀಪ ಹತ್ಯೆಗೀಡಾಗಿದ್ದ ಕಾರ್ತಿಕ್ ರಾಜ್ ಮನೆಗೆ ರಾಜ್ಯ ಗೃಹಸಚಿವ ಜಿ.ಪರಮೇಶ್ವರ್ ಭೇಟಿ ಮಾಡಿ ಹೆತ್ತವರಿಗೆ ಸಾಂತ್ವನ ಹೇಳಿದರು.

ಕಾರ್ತಿಕ್ ನನ್ನು ಆತನ ತಂಗಿ ಕಾವ್ಯಾಳೇ ಸುಪಾರಿ ನೀಡುವುದಾಗಿ ಭರವಸೆ ನೀಡಿ ಕುತ್ತಾರು ಸಂತೋಷನಗರ ನಿವಾಸಿ ಸಹೋದರರಾದ ಗೌತಂ ಮತ್ತು ಗೌರವ್ ಎಂಬವರಿಂದ ಹತ್ಯೆ ನಡೆಸಿದ್ದಳು. ಎರಡು ದಿನಗಳ ಹಿಂದೆಯಷ್ಟೇ ಮೂವರು ಆರೋಪಿಗಳ ಬಂಧನವಾಗಿತ್ತು.

ಭೇಟಿ ಸಂದರ್ಭ ಪಜೀರು ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Exit mobile version