Site icon Ullalavani

ಸೋಮೇಶ್ವರ : ವಿಕಲಚೇತನರಿಗೆ ಸಹಾಯಧನ ವಿತರಣೆ

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್

ಉಳ್ಳಾಲ : ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಕಲಚೇತನರನ್ನು ಗುರುತಿಸಿ ಅವರಿಗೆ ಸಿಗುವ ಸರಕಾರ ಸವಲತ್ತನ್ನು ನೀಡಲು ಪಂಚಾಯತ್ ಸಿದ್ಧವಿದೆ ಎಂದು ಸೋಮೇಶ್ವರ ಗ್ರಾಮ ಪಂಚಾಯತ್ನ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅಭಿಪ್ರಾಯಪಟ್ಟರು.

ಸೋಮೇಶ್ವರ ಗ್ರಾಮ ಪಂಚಾಯತ್ನಲ್ಲಿ ನಡೆದ ಅರಿವಿನ ಸಿಂಚನ ಕಾರ್ಯಕ್ರಮದಲ್ಲಿ 51 ವಿಕಲಚೇತನರಿಗೆ ಸಹಾಯಧನ ವಿತರಿಸಿ ಮಾತನಾಡಿದರು.
ಪಂಚಾಯತ್ನಲ್ಲಿ ಸಹಾಯಧನಕ್ಕಾಗಿ 51 ಅರ್ಜಿಗಳು ಬಂದಿದ್ದು, ಎಲ್ಲಾ ಅರ್ಜಿಗಳಿಗೂ ಸಹಾಯಧನವನ್ನು ವಿತರಿಸಲಾಗಿದೆ. ವಿಕಲಚೇತನರೂ ಇತರರಂತೆ ಬದುಕು ಕಟ್ಟಿಕೊಳ್ಳುವ ಕಾರ್ಯ ಆಗಬೇಕು ಈ ನಿಟ್ಟನಲ್ಲಿ ಪಂಚಾಯತ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್ ಸೋಮೇಶ್ವರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನೋಹರ ಗೌಡ, ಸಿಬ್ಬಂದಿ ರೂಪ ಉಳಿಯ, ಪಂಚಾಯತ್ ಸದಸ್ಯರಾದ ಮನೋಜ್ ಕಟ್ಟೆಮನೆ, ಹರಿಶ್ಚಂದ್ರ ಅಡ್ಕ, ಹರೀಶ್ ಕುಂಪಲ, ಶೈಲೇಶ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

Exit mobile version