Site icon Ullalavani

ಬಾಲಕನ ಆಸೆ ಈಡೇರಿಸಿದ ಸಚಿವ ಖಾದರ್

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಜನಸಾಮಾನ್ಯರ, ವಿದ್ಯಾರ್ಥಿಗಳ ಬೇಡಿಕೆಗಳಿಗೆ, ಅಹವಾಲಿಗೆ ತಕ್ಷಣ ಸ್ಪಂದಿಸುವ ಸಚಿವ ಯು. ಟಿ. ಖಾದರ್ ಇದೀಗ ಗ್ರಾಮೀಣ ಪ್ರದೇಶದ ಬಾಲಕನೊಬ್ಬನ ಆಸೆಯೊಂದನ್ನು ಈಡೇರಿಸಿದ್ದಾರೆ.

ಪುತ್ತೂರು ತಾಲೂಕಿನ ಕಡಬ ಹೊಸಮಠ ಎಂಬಲ್ಲಿನ ಎಚ್.ಕೆ. ಮೊಹಿದೀನ್ ಎಂಬವರ ಪುತ್ರ ಮುಹಮ್ಮದ್ ರಾಹೀದ್ ಪ್ರತಿಭಾವಂತ ಬಾಲಕ. ಕಡಬ ಕ್ನಾಯನ ಜ್ಯೋತಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾದ ಈತನಿಗೆ ಅದೇಕೋ ಐಪಿಎಲ್ ಕ್ರಿಕೆಟ್ ಪಂದ್ಯಾಟ ಪ್ರತ್ಯಕ್ಷ ನೋಡಬೇಕೆಂಬ ಆಸೆ ಮನಸ್ಸಿನಲ್ಲಿತ್ತು. ಇದು ಈಡೇರುತ್ತಾ ಇಲ್ಲವೋ ಎಂದು ಈತನಿಗೆ ಗೊತ್ತಿರಲಿಲ್ಲ.ಈಗಿರುವಾಗ, ಇತ್ತೀಚೆಗೆ ರಾಹಿದ್ ಮಂಗಳೂರಿನಲ್ಲಿ ಮದುವೆ ಕಾಯ9ಕ್ರಮವೊಂದಕ್ಕೆ ಹೋಗಿದ್ದಾಗ, ಆ ಹಾಲ್ ಗೆ ಸಚಿವ ಯು.ಟಿ. ಖಾದರ್ ಕೂಡಾ ಬಂದಿದ್ದರು. ಅಲ್ಲಿ ಸ್ವಲ್ಪ ಕಷ್ಟಪಟ್ಟು ನೇರವಾಗಿ ಸಚಿವರನ್ನು ಭೇಟಿಯಾದ ರಾಹಿದ್, ತನ್ನ ಪರಿಚಯ ಹೇಳಿ, ತನಗೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾಟ ವೀಕ್ಷಿಸಲು ಟಿಕೆಟ್ ಒದಗಿಸಿಕೊಡುವಂತೆ ಸಚಿವರಲ್ಲಿ ಪುಟ್ಟ ಬೇಡಿಕೆ ಇಟ್ಟನು.

ಬಾಲಕನ ಈ ಬೇಡಿಕೆಗೆ ತಲೆದೂಗಿದ ಸಚಿವರು, ಅತನ ಶಾಲಾ ಸಾಧನೆಗಳು, ಮಾಕ್ಸ್9 ವಿಚಾರಿಸಿದರು. ಬಳಿಕ ತನ್ನ ಆಪ್ತ ಸಹಾಯಕರನ್ನು ಕರೆದು, ಐಪಿಎಲ್ ಪಂದ್ಯಾಟದ ಎರಡು ಟಿಕೆಟ್ ನೀಡಲು ವ್ಯವಸ್ಥೆ ಮಾಡಲು ಸೂಚಿಸಿದರು.

ಅದರಂತೆ ರಾಹಿದ್ ತನ್ನ ಮಾವನ ಜತೆಗೂಡಿ ಬೆಂಗಳೂರಿಗೆ ತೆರಳಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಖಅಃ ಮತ್ತು ಹೈದರಾಬಾದ್ ತಂಡಗಳ ಐಪಿಎಲ್ ಪಂದ್ಯಾಟವನ್ನು ಗಿ I P ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿ ಸಂಭ್ರಮಿಸಿದನು.ರಾಹಿದ್ ಗೆ ಬೆಂಗಳೂರಿನ ತನ್ನ ಮನೆಯಲ್ಲಿಯೇ ವಸತಿ, ಭೋಜನದ ವ್ಯವಸ್ಥೆಯನ್ನೂ ಸಚಿವ ಯು.ಟಿ. ಖಾದರ್ ಕಲ್ಪಿಸಿಕೊಟ್ಟಿದ್ದರು.

‌ ಬಾಲಕ ರಾಹಿದ್ ಗಂತೂ ಇಂದು ಸಂಭ್ರಮವೋ ಸಂಭ್ರಮ. ಅನಿರೀಕ್ಷಿತವಾಗಿ ತನ್ನ ಆಸೆ ಈಡೇರಿದ ಈತನ ಸಂತಸಕ್ಕೆ ಪಾರವೇ ಇಲ್ಲ.
ಪುಟ್ಟ ಬಾಲಕನ  ಆಸೆಯನ್ನು ಪೂರೈಸುವ ಮೂಲಕ ಸಚಿವರು ಸದ್ಯ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

Exit mobile version