Site icon Ullalavani

ಯುವತಿಯ ಅಪರೂಪದ ಶಸ್ತ್ರಚಿಕಿತ್ಸೆ ಪೂರೈಸಿದ ಕಣಚೂರು ಆಸ್ಪತ್ರೆ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಕಣಚೂರು: ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಬಲುಅಪರೂಪದ ಹಾಗೂ ಅತಿಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವ ಮೂಲಕ ಯುವತಿಯೋರ್ವಳ ಬಾಳು ಹಸನಾಗಿಸಿದ್ದಾರೆ.

33 ರ ಹರೆಯದ ಮೂಡಬಿದ್ರೆ ಮೂಲದ ರುಬೀನಾ ಎಂಬವರ ಕಣ್ಣುಗಳ ಅಂತರ 60 ಮಿಲಿ ಮೀಟರ್ ದೂರವಾಗಿತ್ತು. ಹುಟ್ಟಿದ ದಿನದಿಂದಲೇ ಇಂತಹ ನ್ಯೂನ್ಯತೆಯಲ್ಲಿದ್ದ ಯುವತಿಯ ಬಾಳು ಎಲ್ಲರಂತಿರಲಿಲ್ಲ. ಇದರಿಂದ ವಿವಾಹ ಭಾಗ್ಯವೂ ಆಕೆಗೆ ಬಂದಿರಲಿಲ್ಲ. ಇದೊಂದು ರೋಗವಲ್ಲದಿದ್ದರೂ ಸಮಾಜ ಆಕೆಯನ್ನು ಎದುರಿಸುವ ರೀತಿ ವಿಭಿನ್ನವಾಗಿತ್ತು. ಇದರಿಂದ ಆಕೆ ಹಾಗೂ ಮನೆಮಂದಿ ಮಾನಸಿಕವಾಗಿ ನೊಂದು, ಮಗಳ ಭವಿಷ್ಯದ ಭೀತಿಯನ್ನು ಹೆತ್ತವರು ಎದುರಿಸುತ್ತಿದ್ದರು. ಆಧುನಿಕ ವೈದ್ಯಕೀಯ ತಂತ್ರಜ್ಞರಿಂದ ಸರಿಪಡಿಸಲು ಸಾಧ್ಯವೇ, ಅಲ್ಲದೆ ಅದರ ಖರ್ಚು ಲಕ್ಷಾಂತರ ವ್ಯಯ ಆಗುವ ಹೆದರಿಕೆಯಿಂದ ಮನೆಯಲ್ಲಿಯೇ ಉಳಿಸಿಕೊಂಡಿದ್ದರು. ಇತ್ತೀಚೆಗೆ ಮನಸ್ಸು ಮಾಡಿದ ಹೆತ್ತವರು ನಾಟೆಕಲ್ ಕಣಚೂರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ತಂಡದ ಜತೆಗೆ ಮಾತುಕತೆ ನಡೆಸಿದಾಗ, ಉಳಿದ ಆಸ್ಪತ್ರೆಗಳಲ್ಲಿ ತಗಲುವ ವೆಚ್ಚಕ್ಕಿಂತ ಕಡಿಮೆ ವೆಚ್ಛದಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರ ಭರವಸೆಯಿಂದ ಕಣಚೂರು ಆಸ್ಪತ್ರೆಯಲ್ಲಿ ಮಗಳನ್ನು ದಾಖಲಿಸಿಕೊಂಡರು. ಅಲ್ಲಿ ಪರಿಶೀಲನೆ ನಡೆಸಿದ ವೈದ್ಯರು ಅತಿಸೂಕ್ಷ್ಮ ಹಾಗೂ ಅಪರೂಪದ ಶಸ್ತ್ರಚಿಕಿತ್ಸೆ ಆಗುವುದರಿಂದ ಸೂಪರ್ ಸ್ಪೆಷಾಲಿಟಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದು ಆಸ್ಪತ್ರೆಯ ಮೆಕ್ಸಿಲೊಫೇಷಿಯಲ್ ಸರ್ಜನ್ ಗಳಾದ ಡಾ.ಮುಸ್ತಾಫ.ಕೆ ಮತ್ತು ತಂಡ ಧೈರ್ಯವಾಗಿ ಶಸ್ತ್ರಚಿಕಿತ್ಸೆಗೆ ಕೈ ಹಾಕಿತ್ತು.

ನಿರಂತರ 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರುಗಳ ತಂಡ ಯುವತಿ ರುಬೀನಾಳ ಮುಖದ ಭಾಗದ ಕಣ್ಣುಗಳ ನಡುವೆ ಇದ್ದ ಹೆಚ್ಚುವರಿ ಎಲುಬುಗಳನ್ನು ಕತ್ತರಿಸಿ, ತುಂಡರಿಸಿದ ಎಲುಬುಗಳಿಗೆ ಸುಮಾರು 10 ರಷ್ಟು ಟೈಟೇನಿಯಂನ ಪ್ಲೇಟ್ ಗಳನ್ನು ಅಳವಡಿಸಿ ಅಗಲವಾಗಿ ಕಾಣುತ್ತಿದ್ದ ಮುಖವನ್ನು ಸಾಮಾನ್ಯರಂತೆ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಲು ಅಪರೂಪವಾಗಿರುವ ಪ್ರಕರಣ 700 ರಲ್ಲಿ 1 ಮಂದಿಗೆ ಮಾತ್ರ ಬರುತ್ತದೆ. ಇಂತಹ ಶಸ್ತ್ರಚಿಕಿತ್ಸೆಯೂ ಜಿಲ್ಲೆಯಲ್ಲಿ ಪ್ರಥಮ ಬಾರಿ ಮಾಡಲಾಗಿದೆ. ಬೆಂಗಳೂರಿನಿಂದ ಆಕೆಯ ಮುಖದ ಮಾದರಿಯನ್ನು ತಯಾರಿಸಿ, ಅದರ ಮೂಲಕ ರೂಪುರೇಷೆಯನ್ನು ತಯಾರಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಂiÀiನ್ನು ಪೂರೈಸಲಾಗಿದೆ. ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾದ ನಂತರ ಆಕೆಯ ಆರೋಗ್ಯದ ಏರುಪೇರುಗಳನ್ನು ಪರಿಶೀಲಿಸಿ, ಶಸ್ತ್ರಚಿಕಿತ್ಸೆಗೆ ಸಮರ್ಥಳೆಂದು ಆದ ನಂತರವಷ್ಟೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಿರಂತರ 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿತ್ತು . ಇದು ಯುವತಿ ಸೌಂದರ್ಯಳಾಗಬೇಕೆಂಬ ಉದ್ದೇಶದಿಂದ ನಡೆದಿರುವ ಶಸ್ತ್ರಚಿಕಿತ್ಸೆಯಲ್ಲ ಬದಲಾಗಿ ಎಲ್ಲರೂ ಒಪ್ಪಿಕೊಳ್ಳಬೇಕು ಅನ್ನುವ ಉದ್ದೇಶದಿಂದ ನಡೆದಿರುವುದಾಗಿದೆ. ಕಾರಣ ಆಕೆಯನ್ನು ಸಮಾಜ ತುಚ್ಛವಾಗಿ ನೋಡಿರುವ ಅನೇಕ ಉದಾಹರಣೆಗಳು ಇತ್ತು ಎಂಬುದು ಆಕೆಯ ಸಂಬಂಧಿಕರಿಂದಲೇ ತಿಳಿದುಬಂದಿತ್ತು ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿಕೊಂಡ ಡಾ.ಮುಸ್ತಾಫ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಯಲ್ಲಿ ಸರ್ಜನ್ ಗಳಾದ ಡಾ.ಶ್ರೇಯಸ್ ಸೊರಕೆ, ಡಾ.ಆಪ್ರೀನ್ ಅಫ್ತಾಬ್, ಡಾ.ಪ್ರಶಾಂತ್.ಎಲ್. ಮೋನಿಸ್, ಡಾ.ಲಿಡಾ ಫಿಲಿಪ್, ನರಶಸ್ತ್ರಚಿಕಿತ್ಸಕರಾದ ಡಾ.ರಜನೀಶ್ ಮಿಶ್ರಾ, ನೇತ್ರಶಾಸ್ತ್ರಜ್ಞ ಡಾ.ಬದರೀನಾಥ್ ತಲ್ವಾರ್, ಅರಿವಳಿಕೆ ತಜ್ಞರಾದ ಡಾ.ಅಝೀಂ, ಡಾ.ಮೇಘ ಭಾಗವಹಿಸಿದ್ದರು.

ನಾಟೆಕಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕುರಿತು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹಿಮಾನ್ ಕಣಚೂರು , ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರೋಹನ್ ಮೋನಿಸ್, ವೈದ್ಯಕೀಯ ಅಧೀಕ್ಷಕ ಡಾ.ದೇವಿಪ್ರಸಾದ್, ಡೀನ್. ಡಾ.ಹೆಚ್.ಎಸ್ ವಿರೂಪಾಕ್ಷ ಉಪಸ್ಥಿತರಿದ್ದರು.

Exit mobile version