Site icon Ullalavani

ಎ.27 ತು.ರ.ವೇ ಯಿಂದ ಮುನ್ನೂರು ಪಂಚಾಯಿತಿ ವಿರುದ್ಧ ಪ್ರತಿಭಟನೆ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಮುನ್ನೂರು : ಶಿಕ್ಷಣ ಕಾಶಿ  ಎಂದೇ ಬಿರುದು ಪಡೆದುಕೊಂಡಿರುವ  ಮಂಗಳೂರು ವಿಧಾನಸಭಾ ಕ್ಷೇತ್ರದ ಮುನ್ನೂರು ಗ್ರಾಮ ಪಂಚಾಯಿತಿ  ವ್ಯಾಪ್ತಿಯಲ್ಲಿ  ತ್ಯಾಜ್ಯ ವಿಲೇವಾರಿ ಸಮಸ್ಯೆ ಬಹಳಷ್ಟು ತಲೆದೋರಿದ್ದು, ಸಮಸ್ಯೆಗೆ ಪಂಚಾಯಿತಿ ಯಾವುದೇ ಸ್ಪಂಧನೆ  ನೀಡದೇ ಇರುವುದರ ವಿರುದ್ದ ತುಳುನಾಡು ರಕ್ಷಣಾ ವೇದಿಕೆಯಿಂದ  ಎ.೨೭ ಕ್ಕೆ  ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತು.ರ.ವೇ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿರಾಜ್ ಅಡ್ಕರೆ ಹೇಳಿದ್ದಾರೆ.

ಕುತ್ತಾರು ಮುನ್ನೂರು ಘಟಕದ ಕಚೇರಿಯಲ್ಲಿ  ಬುಧವಾರ ಹಮ್ಮಿಕೊಂಡಿದ್ದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುನ್ನೂರು ಗ್ರಾಮದ ಪ್ರತಿ ರಸ್ತೆಯಲ್ಲಿ ಘನ ತ್ಯಾಜ್ಯಗಳು ಎಲ್ಲೆಂದರೆಲ್ಲಿ  ಬಿದ್ದಿವೆ. ಇದರಿಂದ ಶಾಲಾ ಮಕ್ಕಳು, ಮಹಿಳೆಯರು, ವಿದ್ಯಾರ್ಥಿ ಗಳು , ಹಿರಿಯ ನಾಗರಿಕರು ಓಡಾಡಲು ಸಾಧ್ಯವಾಗದ ಸ್ಥಿತಿ ನಿಮಾ೯ಣವಾಗಿದೆ.  ಇದು ಜನರ ಆರೋಗ್ಯದ ಮೇಲೂ ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತಿದೆ.  ಘನ ತ್ಯಾಜ್ಯ ವಿಲೇವಾರಿಗೆ ತ್ಯಾಜ್ಯ ನಿವ೯ಹಣಾ ಘಟಕ ಮತ್ತು ವಾಹನ ಸೇರಿ ಸೂಕ್ತ ವ್ಯವಸ್ಥೆ ಸರಕಾರದಿಂದ ಮಂಜೂರಾಗಿ ವಷ೯ ಗಳೇ  ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ. ಇದಕ್ಕೆ  ಆಡಳಿತ ವ್ಯವಸ್ಥೆ ಯ ವೈಫಲ್ಯ ವೇ ಕಾರಣವಾಗಿದೆ. ಅಧಿಕಾರಿಗಳ, ಜನಪ್ರತಿನಿಧಿಗಳ ಕತ೯ವ್ಯಲೋಪದಿಂದ ಇಂತಹ ಅವ್ಯವಸ್ಥೆ ಸೃಷ್ಟಿಯಾಗಿ ದೆ.  ಅಲ್ಲದೆ ಈ ಕುರಿತು ಪಂಚಾಯಿತಿಗೆ ಮನವಿ ಮಾಡಿದರೂ ಸ್ಪಂಧನೆ ದೊರೆಯದ ಹಿನ್ನೆಲೆಯಲ್ಲಿ  ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ  ಉಪಾಧ್ಯಕ್ಷ ರಹೀಂ ಕುತ್ತಾರ್,  ರಾಜೇಶ್ ಕುತ್ತಾರ್,  ಅರುಣ್ ಡಿಸೋಜ, ಲಿಯೋ ಡಿಸೋಜ,  ಮುಸ್ತಾಫ, ಜಮಾಲ್, ಕಿಶೋರ್, ರಶೀದ್ ಜೆಪ್ಪು, ರಕ್ಷಿತ್ ಕೆ. ಬಂಗೇರ ಇದ್ದರು.

 

Exit mobile version