ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ : ಸಮುದ್ರಕ್ಕೆ ಸ್ನಾನಕ್ಕಿಳಿದ ವ್ಯಕ್ತಿಯೋವ೯ರು ಸಮುದ್ರಪಾಲಾದ ಘಟನೆ ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಸೀಗ್ರೌಂಡ್ ಎಂಬಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಮಾಸ್ತಿಕಟ್ಟೆ ನಿವಾಸಿ ಹನೀಫ್ ಮಾಸ್ತಿಕಟ್ಟೆ(೩೫) ಸಮುದ್ರಪಾಲಾದವರು. ಬಿಸಿಲಿನಿಂದಾಗಿ ಮೈಯಲ್ಲಿ ಹುಣ್ಣಾಗಿತ್ತು ಎಂದು ಉಪ್ಪು ನೀರಿನ ಸ್ನಾನಕ್ಕೆಂದು ಬೆಳಿಗ್ಗೆ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿ ಸಮುದ್ರಪಾಲಾಗಿದ್ದಾರೆ. ಸ್ಥಳೀಯರು ಶೋಧ ಕಾಯ೯ ಮಂದುವರಿಸಿದ್ದಾರೆ. ವಿವಾಹಿತರಾಗಿದ್ದ ಹನೀಫ್ ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ.
ಸಮುದ್ರದಲ್ಲಿ ಶೋಧ ಕಾಯ೯ ನಡೆಯುತ್ತಿದೆ.
