Site icon Ullalavani

ಕೆ.ಸಿ.ನಗರದಲ್ಲಿ ಎಸ್‍ವೈಎಸ್ ಕೆ.ಸಿ ರೋಡ್ ಸೆಂಟರ್ ಮಹಾಸಮ್ಮೇಳನ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಯುವ ಸಮುದಾಯಕ್ಕೆ ಎಸ್‍ಎಸ್‍ಎಫ್ , ಹಿರಿ ವಯಸ್ಸಿನಲ್ಲಿ ಎಸ್ ವೈಎಸ್ ಜತೆಗಿನ ಸಂಬಂಧದಿಂದ ಎಲ್ಲರೂ ಧಾರ್ಮಿಕ ಸ್ಪರ್ಶದಿಂದ ಬಾಳಲು ಸಾಧ್ಯ. ಈ ಮೂಲಕ ಪ್ರವಾದಿಯವರ ಆದರ್ಶಗಳನ್ನು ಪಾಲಿಸುವಂತಾಗಬೇಕಿದೆ ಎಂದು ಎಸ್ ವೈ ಎಸ್ ರಾಜ್ಯ ಮುಖಂಡ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಹೇಳಿದರು.

 

 

ಅವರು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್ ) ಇದರ ಸೆಂಟರ್ ಸಮ್ಮೇಳನದ ಪ್ರಯುಕ್ತ ಕೆ.ಸಿ.ನಗರದ ಜಂಕ್ಷನ್ನಿನಲ್ಲಿ ಭಾನುವಾರ ಜರಗಿದ ಎಸ್ ವೈ ಎಸ್ ಕೆ.ಸಿ ರೋಡ್ ಸೆಂಟರ್ ಮಹಾಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಪ್ರಭಾಷಣಕಾರ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಮಾತನಾಡಿ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಕೆ.ಸಿ.ರೋಡಿನ ಎಸ್ ವೈ ಎಸ್ ಸೆಂಟರ್ ತೊಡಗಿಸಿಕೊಳ್ಳುವ ಮೂಲಕ ಜನರ ಸಂಕಷ್ಟಗಳಿಗೆ ಸಾಂತ್ವನ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವುದು ಶ್ಲಾಘನೀಯ ಎಂದರು.

ಸೆಯ್ಯಿದ್ ಸಿ.ಟಿ.ಎಂ ಸಲೀಂ ಅಸ್ಸಖಾಫ್ ತಂಙಳ್ ದುಆ ನೆರವೇರಿಸಿದರು. ಉಮ್ಮರ್ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಮುಖ್ಯ ಪ್ರಭಾಷಣಗೈದರು. ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಎಸ್ ವೈ ಎಸ್ ಜಿಲ್ಲಾ ನೇತಾರ ಅಶ್ರಫ್ ಕಿನಾರ, ಎಸ್‍ಎಂಎ ಉಳ್ಳಾಲ ಝೋನ್ ಅಧ್ಯಕ್ಷ ಅಹಮ್ಮದ್ ಕುಂಞ ಹಾಜಿ, ಎಸ್ ಎಂ ಎ ತಲಪಾಡಿ ಅಧ್ಯಕ್ಷ ಅಬ್ಬಾಸ್ ಹಾಜಿ, ಎಸ್ ಎಸ್ ಎಫ್ ಕೋಟೆಕಾರು ಅಧ್ಯಕ್ಷ ಅಬ್ದುಲ್ ಬಾರಿ ಸಅದಿ, ಎಸ್ ಎಸ್ ಎಫ್ ತಲಪಾಡಿ ಅಧ್ಯಕ್ಷ ರೆಹಮಾನ್ ಝುಹುರಿ, ಉಚ್ಚಿಲ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಪೆರಿಬೈಲ್, ಸ್ವಾಗತ ಸಮಿತಿ ಅಧ್ಯಕ್ಷ ಯು.ಬಿ.ಮಹಮ್ಮದ್ ಹಾಜಿ, ಕೆ.ಸಿನಗರದ ಅಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಹಸನಬ್ಬ ಹಾಜಿ, ಉಸ್ಮಾನ್ ಕೆ.ಎ, ಎಸ್ ವೈಎಸ್ ಕೆ.ಸಿ. ರೋಡ್ ಸೆಂಟರಿನ ಕಾರ್ಯದರ್ಶಿ ಉಸ್ಮಾನ್ ಕೆ.ಎ, ತಲಪಾಡಿ ಎಸ್ ಜೆ ಎಂ ನ ಅಧ್ಯಕ್ಷ ಇಬ್ರಾಹಿಂ ಮದನಿ ಉಪಸ್ಥಿತರಿದ್ದರು.
ಸ್ತಳೀಯ ಖತೀಬರಾದ ಹನೀಫ್ ಸಖಾಫಿ ಸ್ವಾಗತಿಸಿದರು. ಎಸ್ ವೈ ಎಸ್ ಜತೆ ಕಾರ್ಯದರ್ಶಿ ಫಾರುಕ್ ಕೋಟೆಪುರ ವಂದಿಸಿದರು.

Exit mobile version