ಉಳ್ಳಾಲ ನ್ಯೂಸ್ ನೆಟ್ ವರ್ಕ್
ನರಿಂಗಾನ: ಮೋರ್ಲ ರೇವತಿ.ಎಸ್ ಆಳ್ವ ಮತ್ತು ಮಕ್ಕಳು , ಲಕ್ಷ್ಮೀ.ಎನ್ ಆಳ್ವ ಮತ್ತು ಮಕ್ಕಳು ಹಾಗೂ ಪ್ರಭಾಕರ್ ಶೆಟ್ಟಿ ಸಹೋದರರು ಸೇವಾರೂಪದಲ್ಲಿ ಇತ್ತೀಚೆಗೆ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ಆಯೋಜಿಸಿದ್ದರು.
ಈ ಸಂದರ್ಭ ಬಿಜೆಪಿ ರಾಜ್ಯಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್, ರವೀಂದ್ರ ಶೆಟ್ಟಿ ದೊಡ್ಡಮನೆ ಮುಖ್ಯ ಅತಿಥಿಗಳಾಗಿ ದ್ದರು.
ರೊಟರ್ಯಾಕ್ಟ್ ವಿಕ್ರಂ ದತ್ತ , ಡಾ. ಮೋಹನ್‍ದಾಸ್ ಪೈ, ವಿಶ್ವನಾಥ ಶೆಟ್ಟಿ ಮೋರ್ಲ, ಚಂದ್ರಹಾಸ್ ಶೆಟ್ಟಿ ಮೋರ್ಲ, ಶಿವರಾಂ ಶೆಟ್ಟಿ ಸಾಂತ್ಯಗುತ್ತು, ಪ್ರಭಾಕರ್ ಶೆಟ್ಟಿ ಕಿನ್ಯಗುತ್ತು, ರೇವತಿ.ಎಸ್ ಆಳ್ವ, ಲಕ್ಷ್ಮೀ.ಎನ್ ಆಳ್ವ, ಗೀತೇಶ್ ಆಳ್ವ, ಗಿರೀಶ್ ಆಳ್ವ, ಸುಧಾಕರ್ ಆಳ್ವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾಧರ್ ಶೆಟ್ಟಿ ಪೊಸಕುರಲ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಮೋರ್ಲ ಅಶ್ವತ್ಥಕಟ್ಟೆಯಲ್ಲಿ ಅಶ್ವತ್ಥ ಉಪನಯನದ ನವಮ ವಾರ್ಷಿಕೋತ್ಸವದ ಅಂಗವಾಗಿ ಶ್ರೀಸತ್ಯನಾರಾಯಣ ಪೂಜೆ ಮತ್ತು ಆಶ್ಲೇಷ ಪೂಜೆಯನ್ನು ನೆರವೇರಿಸಲಾಯಿತು.