Site icon Ullalavani

ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರಿನಲ್ಲಿ ಪವಿತ್ರ ಗುರುವಾರ ಆಚರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಪೆರ್ಮನ್ನೂರು: ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರಿನಲ್ಲಿ ಪವಿತ್ರ ಗುರುವಾರವನ್ನು ಎಪ್ರಿಲ್ 13 ರಂದು ಆಚರಿಸಲಾಯಿತು.ಪ್ರಭುಯೇಸುವಿನ ಕಷ್ಟ,ಮರಣ ಶಿಲುಬೆ ಹಾಊ ಪುನರುಸ್ಥಾನವನ್ನು ಧ್ಯಾನಿಸುವ ವಾರವೇ ಪವಿತ್ರವಾರ. ಈ ವಾರದಲ್ಲಿರುವ ಪ್ರಮುಖ ದಿನಗಳಲ್ಲಿ ಮೊದಲನೆಯ ಆಚರಣೆಯೇ ಪವಿತ್ರ ಗುರುವಾರ ಪೆರ್ಮನ್ನೂರು ಕೇಂದ್ರದ ಧರ್ಮಗುರುಗಳಾದ ಅತಿ ನಂದನೀಯ ಫಾದರ್ ಜೆ.ಬಿ ಸಲ್ಡಾನ್ಹಾರವರು ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು .

ಸಹಾಯಕ ಧರ್ಮಗುರುಗಳಾದ ನಂದನೀಯ ಫಾದರ್ ಪ್ರವೀಣ್ ಜೋಯ್ ಸಲ್ಡಾನ್ಹಾರವರು ಪ್ರಭು ಕ್ರಿಸ್ತರ ಆದರ್ಶದಂತೆ ನಾವು ನಮ್ಮ ಸಹೋದರ ಸಹೋದರಿಯರ ಸೆಲೆಯನ್ನು ಮಾಡಬೇಕು ಎಂಬ ಪ್ರಭೋದನೆಯನ್ನು ನೀಡಿದರು ಸೇನೆಯ ಹಾಗೂ ದೀನತೆಯ ಸಂಕೇತವಾಗಿ ಯೇಸುವಿನ ಆದರ್ಶದಂತೆ ವಂ|ಫಾ|ಜೆ.ಬಿ.ಸಲ್ಡಾನ್ಹಾರವರು 12 ಮಂದಿಯ ಪಾದಗಳನ್ನು ತೊಳೆದರು.ವಂ|ಫಾ|ನಿಲೇಶ್ ಕ್ರಾಸ್ತಾ,ವಂ|ಫಾ| ಎಡ್ವಿನ್ ಮಸ್ಕರೇನ್ಹಸ್,ಉಪಯೋಜಕ ರವಿ ರಿಚ್ಚರ್ಡ್ ಫೆರ್ನಾಂಡಿಸ್,ಧರ್ಮಭಗಿನಿಯರು ಹಾಗೂ 2000 ಮಂದಿ ಈ ಪವಿತ್ರ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡರು.

ಈ ದಿನದ ವಿಶೇಷತೆ ಎಂದರೆ ಪ್ರಭು ಕ್ರಿಸ್ತರು ಶಿಲುಬೆಯಲ್ಲಿ ಸಾಯಲು ಹೋಗುವ ಹಿಂದಿನ ದಿನ ತಮ್ಮ 12 ಶಿಷ್ಯರ ಜೊತೆ ಕೊನೆಯ ಭೋಜನವನ್ನು ಏರ್ಪಡಿಸಿ ರೊಟ್ಟಿ ಹಾಗೂ ದ್ರಾಕ್ಷಾರಸವನ್ನು ಶರೀರ ಹಾಗೂ ರಕ್ತವನ್ನಾಗಿ ಮಾರ್ಪಾಡಿಸಿದರು.”ಇಗೋ ಇದನ್ನು ನನ್ನ ಸ್ಮರಣೆಗಾಗಿ ಮಾಡಿರಿ”ಎಂದು ಹೇಳಿ ಪವಿತ್ರ ಪರಮ ಪ್ರಸಾದವನ್ನು ಸ್ಥಾಪಿಸಿದ ದಿನವೇ ಪವಿತ್ರ ಗುರುವಾರ.

ಫೋಟೋ
ಸ್ಟಾರ್ ಸ್ಟುಡಿಯೋ ಉಳ್ಳಾಲ

Exit mobile version