ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಬೀರಿ: ಬೋರ್‍ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿ ವೇಳೆ ಹೈಟೆನ್ಶನ್ ತಂತಿ ತಗಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಟೆಕಾರು ಬೀರಿ ಎಂಬಲ್ಲಿ ಗುರುವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಲ್ಲಿ ಇನ್ನೋರ್ವ ಯುವಕ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಮೃತ ಉಸ್ಮಾನ್ ಹೆತ್ತವರಿಗೆ ಓರ್ವನೇ ಪುತ್ರನಾಗಿದ್ದ. 9 ನೇ ತರಗತಿ ಮುಗಿಸಿದ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದ ಈತ ಕೂಲಿ ಕೆಲಸ ಇದ್ದಲ್ಲಿ ಮಾತ್ರ ತೆರಳುತ್ತಿದ್ದ. ಇತ್ತೀಚೆಗೆ ಹಲವು ಸಮಯಗಳಿಂದ ಮನೆಯಲ್ಲೇ ಉಳಿದುಕೊಂಡಿದ್ದಾತ ಬುಧವಾರದಂದು ಖಲೀಲ್ ಜತೆಗೆ ಬೋರ್ ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿಯಲ್ಲಿ ಕೈಜೋಡಿಸಿಕೊಂಡಿದ್ದ. ಕೆಲಸದಲ್ಲಿ ಪರಿಣತನಲ್ಲದಿದ್ದರೂ, ಗೊತ್ತಿಲ್ಲದವರನ್ನೇ ಗುತ್ತಿಗೆದಾರ ಕೆಲಸದಲ್ಲಿ ಪಳಗಿಸುತ್ತಿದ್ದ ಎಂದು ಉಸ್ಮಾನ್ ಜತೆಗೆ ಕೆಲಸ ನಿರ್ವಹಿಸಿದ್ದ ಕಾರ್ಮಿಕ ತಿಳಿಸಿದ್ದಾನೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುತ್ತಿಗೆದಾರ ಖಲೀಲ್ ತಲೆಮರೆಸಿಕೊಂಡಿದ್ದು, ಪೊಲೀಸರಿಗೆ ಮಾಹಿತಿ ಪಡೆಯಲು ಕಷ್ಟವಾಯಿತು.