Site icon Ullalavani

ಮಾಡೂರು: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮಾಡೂರು: ಮಾಡೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಶಬರಿ ಫ್ರೆಂಡ್ಸ್ ಮಾಡೂರು ಇದರ ಜಂಟಿ ಸಹಯೋಗದೊಂದಿಗೆ ಯೆನೆಪೋಯ ವಿಶ್ವವಿದ್ಯಾನಿಲಯ ಇದರ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ ಮತ್ತು ದೇರಳಕಟ್ಟೆ ಯೇನೆಪೋಯ ದಂತ ವೈದ್ಯಕೀಯ ಕಾಲೇಜು ಇದರ ಸಮುದಾಯ ದಂತ ವೈದ್ಯಕೀಯ ವಿಭಾಗದ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಎ.16ರ ಭಾನುವಾರದಂದು ಮಾಡೂರು ಕೊರಗಜ್ಜನ ಕಟ್ಟೆಯ ಬಳಿಯ ಮಾತೃಶ್ರೀ ಕಾಂಪ್ಲೆಕ್ಸ್ ನಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನದಿಂದ 12.30ರ ತನಕ ನಡೆಯಲಿದೆ.

ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ, ಮಕ್ಕಳ ತಪಾಸಣೆ, ರಕ್ತದ ಗುಂಪಿನ ವರ್ಗೀಕರಣ ತಪಾಸಣೆ, ಸಕ್ಕರೆ ಕಾಯಿಲೆ, ಗಂಟು,ಎಲುಬು,ಮೂಗು, ಕಿವಿ,ಚರ್ಮಗಳಿಗೆ ಸಂಬಂಧಿಸಿದ ತಪಾಸಣೆ, ಉಚಿತ ದಮತ ತಪಾಸಣೆ ಮತ್ತು ಸಲಹೆ, ಹಲ್ಲುಗಳ ಶುಚಿಕರಣ, ಉಚಿತ ಸೀಳುತುಟಿ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದ್ದು ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಹಸಿರು ಕಾರ್ಡ್ ಹಾಗೂ ಯೆನೆಪೋಯ ಆಸ್ಪತ್ರೆಯ ಹೆಲ್ತ್ ಕಾರ್ಡ್‍ಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ 0824-2280999, 988 031 9101,815 006 3555 ಸಂಪರ್ಕಿಸಬಹುದು.

Exit mobile version