Site icon Ullalavani

ಮಾರ್ಗತಲೆ : ಎ.16-18 ಸ್ವಲಾತ್ ವಾರ್ಷಿಕ ಮತ್ತು ಬೃಹತ್ ಮುಂಜಿ (ಸುನ್ನತ್)

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ : ಮಿಹ್ರಾಜ್ ಜುಮಾ ಮಸೀದಿ ಮತ್ತು ಅಲ್ ಅಮೀನ್ ಸ್ವಲಾತ್ ಕಮಿಟಿ ಮಾರ್ಗತಲೆ ಇದರ ಜಂಟಿ ಆಶ್ರಯದಲ್ಲಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಇವರ ದುವಾ ಆಶೀರ್ವಾದದೊಂದಿಗೆ 2 ದಿನಗಳ ಧಾರ್ಮಿಕ ಪ್ರವಚನ ಮತ್ತು ಸ್ವಲಾತ್ ವಾರ್ಷಿಕ, ಬೃಹತ್ ಮುಂಜಿ (ಸುನ್ನತ್) ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ಎಪ್ರಿಲ್ 16 ರಿಂದ 18 ರ ವರೆಗೆ ಮಾರ್ಗತಲೆ ಮಸೀದಿ ವಠಾರದಲ್ಲಿ ನಡೆಯಲಿದೆ. 16-04 ರವಿವಾರ ಬೆಳಿಗ್ಗೆ 9 ಗಂಟೆಗೆ ಉಚಿತ ಮುಂಜಿ ಕಾರ್ಯಕ್ರಮದ ನಡೆಯಲಿದೆ.

ಇಶಾ ನಮಾಝಿನ ಬಳಿಕ ಅಲ್ಹಾಜ್ ಎಂ.ಪಿ ಹಸನ್ ಮುಅಲ್ಲಿಂ ಅವರಿಂದ ಪ್ರವಾದಿ ಪ್ರೇಮ ಎಂಬ ವಿಷಯದ ಕುರಿತು ಮತ ಪ್ರಭಾಷನ ನಡೆಯಲಿದೆ.17-04 ಸೋಮವಾರ ಇಶಾ ನಮಾಝಿನ ಬಳಿಕ ಟಿ.ಎಂ ಮುಹಿಯದ್ದೀನ್ ಕಾಮಿಲ್ ಸಖಾಫಿ ಅವರಿಂದ ಮತ ಪ್ರಭಾಷನ ನಡೆಯಲಿದೆ.

18-04 ಮಂಗಳವಾರ ಇಶಾ ನಮಾಝಿನ ಬಳಿಕ ಅಸ್ಸಯ್ಯದ್ ಶಿಹಾಬುದ್ದೀನ್ ಸಖಾಫಿ ಅಲ್ ಹೈದ್ರೋಸಿ, ಕಿಲ್ಲೂರ್ ತಂಙಳ್ ರವರ ನೇತೃತ್ವದಲ್ಲಿ ಬ್ರಹತ್ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಅಂದು ರಾತ್ರಿ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಅಲ್ ಅಮೀನ್ ಸ್ವಲಾತ್ ಕಮಿಟಿಯ ಅಧ್ಯಕ್ಷರಾದ ಅಲ್ಹಾಜ್ ಯು.ಕೆ ಅಬ್ದುಲ್ ಖಾದಿರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು 9986339910, 7204770775 ,9449332986, 8904184535 ಸಂಪರ್ಕಿಸಬಹುದು.

Exit mobile version