ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಕಲಿಕೆ ಮತ್ತು ಮಾರ್ಕುಗಳ ಧ್ಯಾನದಲ್ಲೇ ಹೆತ್ತವರು ಮಕ್ಕಳನ್ನು ಒತ್ತಡಕ್ಕೆ ಹೇರುವ ಸಂದರ್ಭ, ಅವರಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಅದನ್ನು ಬೆಳೆಸಲು ಚಿಗುರು ಶಿಬಿರ ಸಹಕಾರಿಯಾಗಿದೆ ಎಂದು ಕುಂಪಲ ಕೇಸರಿ ಸೇವಾ ಟ್ರಸ್ಟಿನ ಸ್ಥಾಪಕಾಧ್ಯಕ್ಷ ನಾರಾಯಣ ಕುಂಪಲ ಅಭಿಪ್ರಾಯಪಟ್ಟರು.
ಶಿಬಿರದಿಂದ ಪ್ರತಿಭೆಗಳಿಗೆ ಹೊಸ ದಿಕ್ಕು ನೀಡುವ ಪ್ರಯತ್ನ ಆಗಿದೆ. ಓದು, ಮಾರ್ಕುಗಳಿಗೆ ಮಾತ್ರ ಸೀಮಿತವಾಗಿರುವ ವಿದ್ಯಾರ್ಥಿಗಳಿಗೆ ಪ್ರತಿಭೆಯನ್ನು ಹೊರಹೊಮ್ಮಲು ಇದೊಂದು ಉತ್ತಮ ಅವಕಾಶವಾಗಿದ್ದು, ಪ್ರೇರಣಾದಾಯಿಯಾಗಿ ಬೆಳೆಯುವ ಸಲುವಾಗಿ ಮಕ್ಕಳು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವ ಅಗತ್ಯತೆ ಇದೆ ಎಂದರು.
ಮಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ನವೀನ್ .ಎನ್ ಕೊಣಾಜೆ , ಚಲನಚಿತ್ರ ನಟ ಹಾಗೂ ಖ್ಯಾತ ಮಿಮಿಕ್ರಿ ಕಲಾವಿದ ವಿಸ್ಮಯ ವಿನಾಯಕ್, ಕುಂಪಲ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವಿಶ್ವನಾಥ್, ಹೈಸ್ಕೂಲ್ ವಿಭಾಗದ ಮುಖ್ಯಶಿಕ್ಷಕಿ ರಾಧಿಕಾ, ಕುಂಪಲ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗೇಶ್ ಕುಂಪಲ ಮುಖ್ಯ ಅತಿಥಿಗಳಾಗಿದ್ದರು. ಶಿಬಿರದ ನಿರ್ದೇಶಕ ನವೀನ್ ಪಿಲಾರ್ ಉಪಸ್ಥಿತರಿದ್ದರು.
ಶಿಕ್ಷಕ ನಾಗಪ್ಪ ಪನೋಲಿಬೈಲು ಸ್ವಾಗತಿಸಿದರು. ಗಣರಾಜ್ ಕಾರ್ಯಕ್ರಮ ನಿರ್ವಹಿಸಿದರು. ತೇಜಸ್ವಿನಿ ವಂದಿಸಿದರು.
`ಪರಿಸರದ ಕಾಳಜಿ ಬೆಳೆಯಬೇಕಿದೆ’
ಓದಿನ ಭರದಲ್ಲಿ ಮಕ್ಕಳು ಮೂಲ ಸಂಪತ್ತಾದ ಪರಿಸರವನ್ನು ಮರೆಯುವಂತಹ ವಾತಾವರಣ ನಿರ್ಮಾಣ ಆಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಪರಿಸರದ ಜತೆಗೆ ಕಲಿಯಬೇಕಾದ ಅನಿವಾರ್ಯತೆ ಇದೆ. ಸದ್ಯದ ಆಹಾರ ಪದಾರ್ಥ, ವ್ಯಾಯಾಮಗಳು ಮಕ್ಕಳನ್ನು ಪರಿಸರ ವಿರೋಧಿಯಾಗಿ ಬೆಳೆಸಲಾಗುತ್ತಿದೆ. ಅದಕ್ಕಾಗಿ ಪರಿಸರದ ಕುರಿತ ಕಾಳಜಿಯೊಂದಿಗೆ, ಪರಿಸರವನ್ನು ಉಳಿಸುವ ಜಾಗೃತಿ ಮಕ್ಕಳಲ್ಲಿ ಮೂಡಿಸುವ ಕಾರ್ಯಗಳು ಶಿಬಿರಗಳಿಂದ ಆಗಬೇಕಿದೆ ಎಂದರು.
ಡಾ.ನವೀನ್ .ಎನ್ ಕೊಣಾಜೆ
ಪ್ರಾಧ್ಯಾಪಕರು
ಸರಕಾರಿ ಪ್ರಥಮ ದರ್ಜೆ ಕಾಲೇಜು