Site icon Ullalavani

ಬ್ಯಾರಿ ಗೈಯ್ಸ್ ಕೆಎಸ್‍ಎ ವತಿಯಿಂದ ಬೃಹತ್ ಬ್ಯಾರಿ ಸಂಭ್ರಮ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮಂಗಳೂರು : ಬ್ಯಾರಿ ಗೈಯ್ಸ್ ಕೆಎಸ್‍ಎ ವತಿಯಿಂದ ಎ. 22 ರಂದು ಮಂಗಳೂರಿನ ಪುರಭವನದಲ್ಲಿ ಬೃಹತ್ ಬ್ಯಾರಿ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಈ ವೇಳೆ ನಾಲ್ಕು ಬಡ ಕುಟುಂಬಕ್ಕೆ ನಿರ್ಮಿಸಿಕೊಟ್ಟ ನಾಲ್ಕು ಮನೆಯ ಕೀಲಿ ಕೈ ಹಸ್ತಾಂತರ ಹಾಗೂ ಮುಂದಿನ ಯೋಜನೆಯಾದ ಇಪ್ಪತ್ತು ಮನೆ ನಿರ್ಮಾಣದ ಅರ್ಜಿ ಸ್ವೀಕಾರವು ಇದೇ ಸಂದರ್ಭದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅತ್ಯಾಕರ್ಷಕ ಶೈಲಿಯ ದಫ್ ಪ್ರದರ್ಶನ, ಖುರ್‍ಆನ್ ಸಂಪೂರ್ಣ ಕಂಠಪಾಠ ಮಾಡಿದ ಬಾಲ ಪ್ರತಿಭೆಗಳಿಗೆ ಸನ್ಮಾನ, ರಾಷ್ಟ್ರ ,ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿz. ಇದರೊಂದಿಗೆ ಬೃಹತ್ ರಕ್ತದಾನ ಶಿಬಿರ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ಕಣ್ಣು ತಪಾಸಣಾ ಶಿಬಿರ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ,ರಾಜಕೀಯ,ಶೈಕ್ಷಣಿಕ ರಂಗದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಬ್ಯಾರಿ ಗೈಯ್ಸ್ ಕೆಎಸ್‍ಎ ತಂಡದ ನಾಯಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version