ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇರಳಕಟ್ಟೆಯ ಖಾಸಗಿ ಲಾಡ್ಜೊಂದರಲ್ಲಿ ನಡೆದಿದೆ.
ತಲಶ್ಶೇರಿ ಪಿಣರಾಯಿ ಸಮೀಪದ ಕೋವತ್ತಲತ್ತಿಲ್ ನಿವಾಸಿ ತ್ರಿಕೇಶ್ (35) ಆತ್ಮಹತ್ಯೆಗೈದವರು. ಕೇರಳದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಮಂಗಳವಾರದಂದು ಬಂದಿದ್ದರು. ತಡರಾತ್ರಿ 10 ರ ವೇಳೆ ದೇರಳಕಟ್ಟೆ ಸಮೀಪ ಲಾಡ್ಜಿನಲ್ಲಿ ರೂಮನ್ನು ಬುಕ್ ಮಾಡಿದ್ದರು. ಬುಧವಾರ ಮಧ್ಯಾಹ್ನ ವೇಳೆ ಮರತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನಾರೋಗ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.