ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಪುತ್ತೂರು: ಪುತ್ತೂರು ನಗಾರಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನಗರ ಯೋಜನಾ ಸಹಾಯಕ ನಿರ್ದೇಶಕಿ 10ಸಾವಿರ ರೂಪಾಯಿ ಹಣ ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ.
ಪೂತ್ತೂರಿನ ರಾಮ್ ಮೋಹನ್ ಪೈ ಎಂಬವರಿಗೆ ಸಂಬಂಧಿಸಿದ ಜಾಗಕ್ಕೆ ಭೂ ಪರಿವರ್ತನೆಗೆ ಎನ್.ಓ.ಸಿ ನೀಡಲು 20ಸಾವಿರ ಲಂಚ ಕೇಳಿದ್ದ ಲಾವಣ್ಯ ಎಂದು ತಿಳಿದು ಬಂದಿದ್ದು. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಸುಧೀರ್ ಹಾಗೂ ಇನ್ಸ್‍ಪೆಕ್ಟರ್ ಯೋಗೀಶ್ ಕುಮಾರು ನೇತೃತ್ವದ ತಂಡ ದಾಳಿ ನಡೆಸಿದೆ.