Site icon Ullalavani

ಮಾನವೀಯತೆಗೆ ಅಡ್ಡಿಯಾಗದ ಜಾತಿ: ಬಡ ಮಹಿಳೆ ನೆರವು ನಿಂತ ಎಸ್‍ವೈಎಸ್

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ತಲಪಾಡಿ :  ತಲಪಾಡಿ ಗ್ರಾಮ ಪಂಚಾಯತ್‍ನ ಮೇಗಿನ ಪಂಜಾಳದಲ್ಲಿ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿಯ ಏಕಾಂಗಿ ಮಹಿಳೆಯ ಮನೆ ದುರಸ್ತಿಯನ್ನು ಎಸ್‍ವೈಎಸ್ ಮೇಗಿನ ಪಂಜಾಳ ಶಾಖೆಯ ವತಿಯಿಂದ ಮಾಡಿ ಕೊಡಲಾಯಿತು.ತಲಪಾಡಿ ಎಸ್‍ಎಸ್‍ವೈಎಸ್ ಸೆಂಟರ್ ಅಧ್ಯಕ್ಷ ಉಮ್ಮರ್ ಎನ್.ಎಸ್. ನೇತೃತ್ವದಲ್ಲಿ ನಡೆದ ಮನೆ ದುರಸ್ತಿ ಕಾರ್ಯ ನಡೆಯಿತು.

ಉಮ್ಮರ್ ಎನ್‍ಎಸ್ : ಎಸ್‍ವೈಎಸ್‍ನ ಮೇಗಿನ ಪಂಜಾಳ ಶಾಖೆಯ ವತಿಯಿಂದ `ಸಾಂತ್ವಾನದ ಕಡೆ ನಮ್ಮ ನಡೆ’ ಎನ್ನುವ ನಿಟ್ಟಿನಲ್ಲಿ ಕಳೆದ 20 ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಗೋಪಿ ಅವರ ಮನೆಯ ದುರಸ್ತಿ ಕಾರ್ಯವನ್ನು ನಡೆಸಿಕೊಟ್ಟಿದ್ದು ಇದು ಒಂದು ಅರ್ಥಪೂರ್ಣ ಕಾರ್ಯಕ್ರಮ. ಪಂಚಾಯತ್‍ನಿಂದ ಯಾವುದೇ ಸಹಾಯ ದೊರಕದೆ ಇದ್ದಾಗ ಗೋಪಿ ಅವರು ನಮ್ಮ ಸಂಘಟನೆಯನ್ನು ಸಂಪರ್ಕಿಸಿದಾಗ ಸಂಸ್ಥೆ ಒಪ್ಪಿಕೊಂಡು ಈ ಕಾರ್ಯ ನಿರ್ವಹಿಸಿದೆ ಇದರಿಂದ ಈ ಪ್ರದೇಶದಲ್ಲಿ ಸಾಮರಸ್ಯದೊಂದಿಗೆ ಜಾತ್ಯಾತೀತವಾದ ಆದರ್ಶ ಸಮಾಜದೊಂದಿಗೆ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದರು.

ಯಹ್ಯಾ : ಸ್ಥಳೀಯ ಬಡವರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದರೆ ಅವರಿಗೆ ಒಳಿತ್ತಾಗುತ್ತದೆ . ಪಂಚಾಯತ್‍ನಿಂದ ಉತ್ತರ ಸಿಗದೆ ಇದ್ದಾಗ ನಮ್ಮ ಸಂಘಟನೆ ಮನೆ ದುರಸ್ತಿ ಮಾಡುವ ಕೆಲಸ ಮಾಡಿದೆ. ಅತ್ಯಂತ ಬಡ ಕುಟುಂಬವಾಗಿರುವುದರಿಂದ ಪಂಚಾಯತ್ ಅವರಿಗೆ ನೀಡುವ ನೀರಿಗೆ ಬಿಲ್ ತೆಗೆದುಕೊಳ್ಳಬಾರದು ಒಂದು ವೇಳೆ ಬಿಲ್ ಪಡೆಯುವುದು ಅನಿವಾರ್ಯವಾದರೆ ನಾವೇ ಪಂಚಾಯತ್‍ಗೆ ಬಿಲ್ ನೀಡಲು ಸಿದ್ಧರಿದ್ದೇವೆ ಎಂದರು.

ಗೋಪಿ : ಮನೆ ದುರಸ್ತಿಗೆಂದು ಗ್ರಾಮ ಪಂಚಾಯತ್‍ನಲ್ಲಿ ಕೇಳಿದರೆ ನಿಮಗೆ ಹಕ್ಕು ಪತ್ರಗಳಾಗಿಲ್ಲ ಎನ್ನುವ ಕಾರಣ ನೀಡಿ ನಾವೇನು ಮಾಡಲು ಸಾಧ್ಯವಿಲ್ಲ ಎನ್ನುವ ಉತ್ತರ ನೀಡುತ್ತಾರೆ. ಈ ನಿಟ್ಟಿನಲ್ಲಿ ಸಂಘಟನೆಯ ಮುಖ್ಯಸ್ಥರಿಗೆ ಮನವಿ ಮಾಡಿದಾಗ ಒಪ್ಪಿಕೊಂಡು ಮನೆ ದುರಸ್ತಿ ಮಾಡಿದ್ದಾರೆ. ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಉಮ್ಮರ್ ಎನ್‍ಎಸ್, ಯಾಹ್ಯಾ , ಸ್ಥಳೀಯ ಘಟಕ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ, ಅಬ್ದುಲ್ ಖಾದರ್, ಮೊೈದಿನ್ ಕುಂಞ ಅಬ್ಬಾಸ್, ಇಕ್ಬಾಲ್, ಶರೀಫ್ ಉಪಸ್ಥಿತರಿದ್ದರು.

Exit mobile version