Site icon Ullalavani

ಡಿಸೀಲ್ ಕಳ್ಳತನ: ಆರೋಪಿಗಳ ಬಂಧನ

 ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೊಣಾಜೆ: ಡೀಸಿಲ್ ಕಳ್ಳತನ ನಡೆಸಿ ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿ ಡೀಸಿಲ್ ಹಾಗೂ ಸ್ಕೂಟರೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು ಅಜಯ್ ಡಿಸೋಜ ಹಾಗೂ ಅವಿನಾಶ್ ಡಿಸೋಜ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಓರ್ವನಾದ ಅಜಯ್ ಎಂಬಾತ ಹರೇಕಳದ ಮೀನುಗಾರಿಕಾ ಸಂಸ್ಥೆಯೊಂದರಲ್ಲಿ ಎ.ಸಿ.ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಡೀಸಿಲನ್ನು ಕ್ಯಾನ್ ಮೂಲಕ ತುಂಬಿಸಿ ತನ್ನ ಸಹೋದರನಾದ ಅವಿನಾಶ್‍ನ ಮೂಲಕ ಅಲ್ಲಿಂದ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಮೀನುಗಾರಿಕಾ ಸಂಸ್ಥೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಡೀಸಿಲ್ ಹಾಗೂ ಸ್ಕೂಟರೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Exit mobile version