Site icon Ullalavani

ಕೊಣಾಜೆ ಎಸ್.ಐ ಶ್ರೀಕಲಾ ಅಮಾನತು

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ತರಕಾರಿ ಅಂಗಡಿ ಮಾಲೀಕ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೋರ್ವರಿಗೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕೊಣಾಜೆ ಅಪರಾಧ ವಿಭಾಗದ ಉಪನಿರೀಕ್ಷಕಿ ಮತ್ತು ಪೊಲೀಸ್ ಪೇದೆಯನ್ನು ಮಂಗಳೂರು ಪೊಲೀಸ್ ಕಮೀಷನರ್ ಹೊರಡಿಸಿದ ಆದೇಶದಂತೆ ಅಮಾನತುಗೊಳಿಸಲಾಗಿದೆ.


ಎ.6 ರ ಸಂಜೆ ವೇಳೆ ಮುಡಿಪು ಪೇಟೆಯಲ್ಲಿದ್ದ ಪರಿಶಿಷ್ಟ ಜಾತಿ ಬೈರ ಸಮುದಾಯಕ್ಕೆ ಸೇರಿದ ಇರಾ ಮೂಳೂರು ನಿವಾಸಿ ರುಕ್ಮಯ್ಯ ಎಂಬªರ ಮೇಲೆ ದೌರ್ಜನ್ಯ ಮತ್ತು ಜಾತಿನಿಂದನೆಗೈದಿದ್ದರೆಂದು ದೂರಲಾಗಿತ್ತು. ಉಪನಿರೀಕ್ಷಕಿ ಶ್ರೀಕಲಾ ಮತ್ತು ಪೇದೆ ರಾಜೇಶ್ ಎಂಬವರು ಸೇರಿಕೊಂಡು ದೌರ್ಜನ್ಯ ಎಸಗಿದ್ದರೆಂದು ರುಕ್ಮಯ್ಯ ಅವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಂತೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡ ಕೊಣಾಜೆ ಪೊಲೀಸ್ ಠಾಣಾಧಿಕಾರಿ ಅಶೋಕ್ ಅವರು ಪೊಲೀಸ್ ಕಮೀಷನರ್ ಅವರಿಗೆ ಪ್ರಕರಣದ ವರದಿ ಸಲ್ಲಿಸಿದ್ದರು. ಅದರಂತೆ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Exit mobile version