Site icon Ullalavani

ಇರಾ: ಸಂಪಿಲ ಸಂಶುಲ್ ಉಲಮಾ ಕ್ರಿಯಾ ಸಮಿತಿ ವಾರ್ಷಿಕೋತ್ಸವ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಇರಾ : ಧಾರ್ಮಿಕ ಅರಿವು ಹಿಂದಿನಿಂದಲೇ ನಡೆಯುತ್ತಿದ್ದರೂ ಮದರಸಾ ಶಿಕ್ಷಣ ಮುಖಾಂತರ ಎಳೆ ಮಕ್ಕಳೂ ಸುಲಲಿತವಾಗಿ ಧಾರ್ಮಿಕ ಜ್ಞಾನ ಪಡೆಯುಂತೆ ಮಾಡಿದ ಕೀರ್ತಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್‍ಗೆ ಸಲ್ಲುತ್ತದೆ ಎಂದು ಪಾತೂರು ಕಜೆ ಎಕೆಎಂ ಅಕಾಡೆಮಿ ಮುಖ್ಯಸ್ಥ ಇ.ಕೆ.ಎಂ ಶರೀಫ್ ಮುಸ್ಲಿಯಾರ್ ಹೇಳಿದರು.ಇರಾ ಸಂಪಿಲ ಸಂಶುಲ್ ಉಲಮಾ ಕ್ರಿಯಾ ಸಮಿತಿಯ ತೃತೀಯ ವಾರ್ಷಿಕೋತ್ಸವ ಹಾಗೂ ಅನುಸ್ಮರಣಾ ಸಂಪಿಲ ಸಂಶುಲ್ ಉಲಮಾ ನಗರದಲ್ಲಿ ಭಾನುವಾರ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾಸರಗೋಡು ಮಸೀದಿಯ ಖತೀಬ್ ಝುಬೈರ್ ಫೈಝಿ ಅಂಕೋಲ ಮಾತನಾಡಿ, ಭಗವಂತ ಅನುಗ್ರಹ ಇದ್ದಲ್ಲಿ ಯಾವುದೇ ಸಂದರ್ಭದಲ್ಲೂ ಯಾರ ಭಯವೂ ಇರುವುದಿಲ್ಲ, ಈ ನಿಟ್ಟಿನಲ್ಲಿ ಭಗವಂತನ ಅನುಗ್ರಹ ದೊರೆಯುವಂತಾಗಲು ಶ್ರಮಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಪ್ರಯುಕ್ತ ಉಸ್ತಾದ್ ಪಾತೂರು ಶೈಖುನಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಸಂಶುಲ್ ಉಲಮಾ ಮೌಲೀದ್ ಪಾರಾಯಣ ಹಾಗೂ ಸಮಸ್ತ ಕೇರಳ ಜಂ-ಇಯತುಲ್ ಉಲಮಾ ಕೇಂದ್ರ ಮುಶಾವರ ನೂತನ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್ ಉಸ್ತಾದ್ ಅವರನ್ನು ಸನ್ಮಾನಿಸಲಾಯಿತು.

ಶೈಖುನಾ ಅಲ್ಹಜ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ದುವಾ ನೆರವೇರಿಸಿದರು. ಅಸ್ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು. ಸಜಿಪ ಕೇಂದ್ರ ಜುಮಾ ಮಸೀದಿಯ ಅಶ್ಪಕ್ ಫೈಝಿ ಅನುಸ್ಮರಣಾ ಭಾಷಣ ಮಾಡಿದರು. ಅಸ್ಲಂ ಅಝ್‍ಹರಿ ಕಣ್ಣೂರು ಮುಖ್ಯ ಭಾಷಣ ಮಾಡಿದರು.
ಸಮಸ್ತ ಮುಫತ್ತಿಸ್ ಹನೀಫ್ ಮುಸ್ಲಿಯಾರ್, ಅಬ್ದುಲ್ಲಾ ಮುಸ್ಲಿಯಾರ್ ಪರಪ್ಪು, ಇಬ್ರಾಹಿಂ ಮುಸ್ಲಿಯಾರ್ ಪಾತೂರು, ಹುಸೈನ್ ಮುಸ್ಲಿಯಾರ್, ಅಬ್ದುಲ್ ಅಝೀಝ್ ಸಾಂಬಾರ್‍ತೋಟ, ಎಚ್.ಇಬ್ರಾಹಿಂ ಮುಸ್ಲಿಯಾರ್, ಎಸ್‍ಕೆಐಎಂವಿಬಿ ಮದ್ರಸಾ ಬೋರ್ಡ್ ಸದಸ್ಯರಾದ ಇಸ್ಮಾಯಿಲ್ ಗೋಳ್ತಮಜಲು, ಅಬೂಬಕ್ಕರ್ ಗೋಳ್ತಮಜಲು, ಕೆ.ಎಂ.ಮೂಸಾ ಚೇರೂರು, ಸಂಪಿಲ ಸಂಶುಲ್ ಉಲಮಾ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ಟಿ.ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.

ಮದರಸ ವಿದ್ಯಾರ್ಥಿ ಮಹಮ್ಮದ್ ಶಾಹಿದ್ ಕಿರಾಅತ್ ಪಠಿಸಿದರು. ಎನ್.ಎ.ಅಬ್ದುಲ್ ಖಾದರ್ ಯಮಾನಿ ಪೆÇಯ್ಯತ್ತಬೈಲ್ ಸ್ವಾಗತಿಸಿದರು. ನಝೀರ್ ಅಹ್ಮದ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.

Exit mobile version