Site icon Ullalavani

ಶಂಕಿತ ಉಗ್ರರ ಬಂಧನ: ಉಳ್ಳಾಲದ ಇಬ್ಬರು ದೋಷಮುಕ್ತ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಶಂಕಿತ ಉಗ್ರರ ಬಂಧನ ಪ್ರಕರಣದ ಹಿನ್ನಲೆಯಲ್ಲಿ 2008ರಲ್ಲಿ ಉಳ್ಳಾಲದಲ್ಲಿ ಬಂಧಿತರಾಗಿದ್ದ ಆರೋಪಿಗಳಲ್ಲಿ ಮೂವರು ಅಪರಾಧಿಗಳೆಂದು ಪರಿಗಣಿಸಿ ಉಳಿದ ನಾಲ್ವರನ್ನು ನಗರದ ನ್ಯಾಯಾಲಯವು ಸೋಮವಾರ ಬೆಳಿಗ್ಗೆ ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.

ಸಾಂದರ್ಭಿಕ ಚಿತ್ರ

ಸೈಯ್ಯದ್ ಮಹಮ್ಮದ್ ನೌಷದ್, ಅಹ್ಮದ್ ಬಾವಾ ಅಬೂಬಕ್ಕರ್ ಮತ್ತು ಫಕೀರ್ ಅಹ್ಮದ್ ಈ ಮೂವರನ್ನು ಅಪರಾಧಿಗಳು ಎಂದು ತೀರ್ಪು ನೀಡಿದ್ದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಇನ್ನುಳಿದ ಮುಹಮ್ಮದ್ ಅಲಿ, ಅವರ ಪುತ್ರ ಜಾವದ್ ಅಲಿ, ಶಬೀರ್ ಭಟ್ಕಳ ಹಾಗೂ ರಫೀಕ್ ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ನಂಟಿನ ಹಿನ್ನೆಲೆಯಲ್ಲಿಯಲ್ಲಿ ಸ್ಫೋಟಕ ಪತ್ತೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಾಕಿದ್ದರೆಂದು ಏಳು ಮಂದಿಯನ್ನು ಮಂಗಳೂರು ಪೆÇಲೀಸರು ಬಂಧಿಸಿದ್ದರು.

ಬಂಧನ ಈ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು ಅಪರಾಧಿಗಳ ಶಿಕ್ಷೆ ಪ್ರಮಾಣ ಪ್ರಕಟವನ್ನು ನ್ಯಾಯಾಲಯವು ಎಪ್ರಿಲ್ 12ಕ್ಕೆ ಮುಂದೂಡಿದೆ.

Exit mobile version