Site icon Ullalavani

ಅಸೈಗೋಳಿ: ಎ.10 : ತುಳುನಾಡ ರಕ್ಷಣಾ ವೇದಿಕೆಯಿಂದ ಖಾಸಗಿ ವಾಹನ ಚಾಲಕರ ವಿಮಾ ನೋಂದಾವಣೆ

ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್

ಅಸೈಗೋಳಿ: ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಖಾಸಗಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಬಸ್ ಚಾಲಕರಿಗಾಗಿ ಖಾಸಗಿ ವಾಣಿಜ್ಯ ವಾಹನ ಚಾಲಕರ ವಿಮಾ ಯೋಜನೆಯ 5 ನೇ ಹಂತದ ನೊಂದಾವಣೆ ಕಾರ್ಯಕ್ರಮ ಎಪ್ರಿಲ್. 10 ರಂದು ಸಂಜೆ 4.00 ಕ್ಕೆ ಅಸೈಗೋಳಿ ಯುವಕ ಮಂಡಲದಲ್ಲಿ ಜರಗಲಿದೆ.

ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರದ ತು.ರವೇ ಅಧ್ಯಕ್ಷ ಸಿರಾಜ್ ಅಡ್ಕರೆ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ತು.ರ.ವೇ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿಕಾ ಜೈನ್, ಗೌರವಾಧ್ಯಕ್ಷ ಡಾ.ಹಾಜಿ ಕೆ.ಎ. ಮುನೀರ್ ಬಾವಾ, ಜಿಲ್ಲಾ ಘಟಕದ ತು.ರ.ವೇ ಅಧ್ಯಕ್ಷ ಹಮೀದ್ ಹಸನ್ ಮಾಡೂರು, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ಹಿರಿಯ ಕಾರ್ಮಿಕ ನಿರೀಕ್ಷಕರುಗಳಾದ ಮೇರಿ, ಗಣಪತಿ ಹೆಗಡೆ, ಯುವ ಘಟಕದ ಜಿಲ್ಲಾಧ್ಯಕ್ಷ ಹರೀಶ್ ಶೆಟ್ಟಿ, ಮಂಗಳೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ರಾಜೇಶ್ ಕುತ್ತಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಚಾಲಕರು ತರಬೇಕಾದ ದಾಖಲೆಗಳು : 1) 5 ಪಾಸ್ ಪೋರ್ಟ್ ಸೈಝ್ ಫೋಟೊ, 2) ಡ್ರೈವಿಂಗ್ ಲೈಸೆನ್ಸ್ ಝೆರಾಕ್ಸ್ ಪ್ರತಿ , 3) ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಪ್ರತಿ , 4) ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ 5) ಬ್ಯಾಡ್ಜ್ ಝೆರಾಕ್ಸ್ ಪ್ರತಿ

Exit mobile version