Site icon Ullalavani

ತಂದೆಯ ಅಸ್ಥಿ ವಿಸರ್ಜಿಸಿದ ಬಾಲಿವುಡ್ ನಟಿ ಐಶ್ವರ್ಯಾ ರೈ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಪ್ಪಿನಂಗಡಿ: ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಶನಿವಾರ ತಮ್ಮ ಹುಟ್ಟೂರಾದ ಮಂಗಳೂರಿಗೆ ಆಗಮಿಸಿದ್ದರು ಆದರೆ ಪ.್ರತೀ ಬಾರಿಯಂತೆ ಖುಷಿಖುಷಿಯಾಗಿ ಹುಟ್ಟೂರಿಗೆ ಭೇಟಿ ಕೊಡುತ್ತಾ ಇದ್ದ ಐಶ್ ಮೊಗದಲ್ಲಿ ಈ ಬಾರಿ ಮಾತ್ರ ಸಂತಸ ಇರಲಿಲ್ಲ. ತಂದೆಯನ್ನು ಕಳೆದುಕೊಂಡಿರೋ ಐಶ್ ಅಪ್ಪನ ಅಸ್ಥಿ ವಿಸರ್ಜನೆಗಾಗಿ ಕುಟುಂಬದ ಜೊತೆಗೆ ಊರಿಗೆ ಬಂದಿದ್ದರು. ಬೇಸರದ ಮಧ್ಯೆಯೇ ಸಂಗಮ ಕ್ಷೇತ್ರದಲ್ಲಿ ತಂದೆಯ ಅಂತಿಮ ವಿಧಿಗಳನ್ನ ಪೂರೈಸಿ ತೆರಳಿದ್ದಾರೆ.

ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಹುಟ್ಟೂರಿನ ಮೇಲೆ ಅದೆಂಥದ್ದೋ ಪ್ರೀತಿ. ಪ್ರತೀ ಬಾರಿ ಹುಟ್ಟೂರಾದ ಮಂಗಳೂರಿಗೆ ಭೇಟಿ ನೀಡೋ ಐಶ್ ಇಲ್ಲಿನ ಸಂಬಂಧಿಕರ ಮನೆ, ದೇವಸ್ಥಾನಗಳಿಗೆ ಭೇಟಿ ನೀಡಿ ವಾಪಾಸಾಗುತ್ತಾರೆ. ಆದರೆ ಈ ಬಾರಿಯ ಭೇಟಿ ಮಾತ್ರ ಅವರ ಪಾಲಿಗೆ ಅತ್ಯಂತ ದುಃಖದಾಯವಾಗಿತ್ತು. ಇದೇ ಮೊದಲ ಬಾರಿಗೆ ಪ್ರೀತಿಯ ಅಪ್ಪನ ಸಾಂಗತ್ಯವಿಲ್ಲದೇ ಐಶ್ ಹುಟ್ಟೂರಿಗೆ ಆಗಮಿಸಿದ್ದರು. ಅದು ಕೂಡ ತಂದೆ ಕೃಷ್ಣ ರಾಜ್ ರೈ ಅವರ ಅಂತಿಮ ಕಾರ್ಯಗಳನ್ನ ಪೂರೈಸಲು. ಹೌದು..ಕಳೆದ ಮಾರ್ಚ್ 18ರಂದು ಐಶ್ ತಂದೆ ಕೃಷ್ಣ ರಾಜ್ ರೈ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ ಖಾಯಿಲೆಯಿಂಧ ಮೃತಪಟ್ಟಿದ್ದರು. ಭಾವನಾತ್ಮಕ ಮತ್ತು ಧಾರ್ಮಿಕ ಸಂಬಂಧದ ಹಿನ್ನೆಲೆಯಲ್ಲಿ ಐಶ್ ತಂದೆಯ ಅಂತಿಮ ವಿಧಿವಿಧಾನಗಳನ್ನ ಹುಟ್ಟೂರಾದ ಮಂಗಳೂರಿನಲ್ಲಿ ನಡೆಸಲಾಗಿದೆ. ಹೀಗಾಗಿ ಐಶ್ ತನ್ನ ಸಹೋದರ ಆದಿತ್ಯ ರೈ, ಮಗಳು ಆರಾಧ್ಯ ಮತ್ತು ತಾಯಿ ಹಾಗೂ ಇತರೆ ಕುಟುಂಬಿಕರ ಜೊತೆಗೆ ಮಂಗಳೂರು ವಿಮಾನ ನಿಲ್ಧಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ನೇರವಾಗಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿರೋ ದಕ್ಷಿಣ ಕಾಶಿ ಅಂತಾನೆ ಪ್ರಸಿದ್ದಿಯಾಗಿರೋ ಸಹಸ್ರಲಿಂಗೇಶ್ವರ ಕ್ಷೇತ್ರಕ್ಕೆ ತೆರಳಿದ್ದಾರೆ. ಅಲ್ಲಿ ಮುಂಬೈನಿಂದ ತಂದಿದ್ದ ತಂದೆಯ ಅಸ್ಥಿಯನ್ನು ನೇತ್ರಾವತಿ-ಕುಮಾರಧಾರ ನದಿಯ ಸಂಗಮ ತೀರದಲ್ಲಿ ವಿಸರ್ಜಿಸಲಾಯಿತು. ಐಶ್ ಸಹೋದರ ಆದಿತ್ಯ ರೈ ತಂದೆಯ ಎಲ್ಲಾ ಅಂತಿಮ ವಿಧಿವಿಧಾನಗಳನ್ನು ಪೂರೈಸಿದರು.

ಐಶ್ ಮೂಲತಃ ಮಂಗಳೂರಿನವರಾದ ಕಾರಣ ಇಲ್ಲಿನ ಸಂಪ್ರದಾಯದಂತೆ ತಂದೆಯ ಅಂತಿಮ ವಿಧಿಗಳನ್ನು ನಡೆಸಲಾಗಿದೆ. ಮಂಗಳೂರು ತಾಲೂಕಿನ ಕೌಡೂರು ಕೃಷ್ಣ ರಾಜ್ ಅವ್ರ ಹುಟ್ಟೂರಾಗಿದ್ದು, ಅದರಂತೆ ಐಶ್ ಸಂಬಂಧಿಕರು ಕೂಡ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸಹೋದರ ಆದಿತ್ಯ ರೈ ನದಿಯಲ್ಲಿ ಅಸ್ಥಿ ವಿಸರ್ಜಿಸಿ ಪಿಂಡ ಪ್ರಧಾನ ಮಾಡಿದ ನಂತರ ಸ್ನಾನ ಮಾಡಿ ಅಂತಿಮ ಕ್ರಿಯಾದಿಗಳನ್ನು ಮುಗಿಸಿದರು. ವೇಳೆ ಐಶ್ ಮತ್ತು ಮಗಳು ಆರಾಧ್ಯೆ ನದಿ ತಟದಲ್ಲೇ ನಿಂತು ಎಲ್ಲಾ ಕ್ರಿಯೆಗಳನ್ನು ಭಾವುಕರಾಗಿಯೇ ವೀಕ್ಷಿಸಿದರು. ಬಳಿಕ ದೇವಸ್ಥಾನಕ್ಕೆ ತೆರಳಿದ ಐಶ್ ಮತ್ತು ಕುಟುಂಬ ಸಹಸ್ರಲಿಂಗೇಶ್ವರ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಅಲ್ಲಿಂದ ಮಂಗಳೂರಿಗೆ ವಾಪಾಸಾಗಿದ್ಧಾರೆ. ಇನ್ನು ಐಶ್ವರ್ಯ ರೈ ಭೇಟಿ ಬಗ್ಗೆ ಮಾಹಿತಿ ಪಡೆದ ಸುತ್ತಮತ್ತಲಿನ ಜನರು ದೇವಸ್ಥಾನಕ್ಕೆ ಆಗಮಿಸಿ ಐಶ್ ನೋಡಲು ಮುಗಿ ಬಿದಿದ್ದರು. ಆದರೆ ಪೆÇಲೀಸರು ಬಿಗಿ ಭದ್ರತೆ ಏರ್ಪಡಿಸಿ ತೊಂದರೆ ಆಗದಂತೆ ನೋಡಿಕೊಂಡಿದ್ಧಾರೆ. ಇನ್ನು ಐಶ್ವರ್ಯ ರೈ ಕೂಡ ತಂದೆಯನ್ನು ಕಳೆದುಕೊಂಡಿರೋ ದುಖದಲ್ಲಿ ಭಾವುಕರಾಗಿಯೇ ಕಂಡು ಬಂದರು. ಹೀಗಾಗಿ ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೇ ನೀಡದೇ ಚಿತ್ರೀಕರಣ ಕೂಡ ಮಾಡದಂತೆ ವಿನಂತಿ ಮಾಡಿಕೊಂಡಿದ್ದಾರೆ. ಇನ್ನು ಉಪ್ಪಿನಂಗಡಿಯ ಗಯಾಪದ ದಕ್ಷಿಣ ಕಾಶಿ ಅಂತಾನೆ ಕರೆಸಿಕೊಳ್ಳುವ ಈ ಸಹಸ್ರ ಲಿಂಗೇಶ್ವರ ಕ್ಷೇತ್ರ ಭಕ್ತಿ ಮುಕ್ತಿಗಳೆರಡನ್ನು ಕರುಣಿಸುವ ಸದ್ಗತಿದಾಯಕವಾದ ಕ್ರಿಯೆಗಳ ಮೂಲಕ ಮೋಕ್ಷಧಾಮವೆನಿಸಿದೆ. ಇಲ್ಲಿನ ನೇತ್ರಾವತಿ ಮತ್ತು ಕುಮಾರಾಧಾರ ನದಿಯ ಸಂಗಮ ತಾಣದಲ್ಲಿ ಉದ್ಭವ ಲಿಂಗವಿದ್ದು, ಕಾಶಿಯ ನಂತ್ರ ದಕ್ಷಿಣ ಭಾರತದಲ್ಲೇ ಇದಕ್ಕೆ ಅತೀ ಪ್ರಾಮುಖ್ಯತೆಯಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಸದ್ಗತಿ ಕ್ರಿಯೆಗೆ ಈ ಕ್ಷೇತ್ರ ಖ್ಯಾತಿ ಪಡೆದುಕೊಂಡಿದೆ.ಇದೇ ಕಾರಣಕ್ಕೆ ಐಶ್ ಕುಟುಂಬ ಕೂಡ ತಂದೆಯ ಅಂತಿಮ ವಿಧಿಗಳನ್ನ ಇದೇ ಕ್ಷೇತ್ರದಲ್ಲೇ ಪೂರೈಸಿದೆ.

ಒಟ್ಟಾರೆ ಐಶ್ ಭೇಟಿ ಪ್ರತೀ ಬಾರಿಯಂತೆ ಖುಷಿಯಾಗಿರಲಿಲ್ಲ. ತಂದೆಯನ್ನು ಕಳೆದುಕೊಂಡಿರೋ ದುಃಖದಲ್ಲೇ ಆಂತಿಮ ವಿಧಿಗಳನ್ನ ಪೂರೈಸಿದ್ದಾರೆ. ಉಳಿದಂತೆ ಇಂದು ಮಂಗಳೂರಿನಲ್ಲಿ ತಂಗಲಿರೋ ಐಶ್ ನಾಳೇ ಉಡುಪಿ, ಮಂಗಳೂರಿನ ಖಾಸಗಿ ಕಾರ್ಯಕ್ರಮಗದಲ್ಲಿ ಭಾಗಿಯಾಗಿ ಮತ್ತೆ ಮುಂಬೈಗೆ ವಾಪಾಸಾಗಲಿದ್ದಾರೆ.

Exit mobile version