ಉಳ್ಳಾಲ ನ್ಯೂಸ್ ನೆಟ್ವರ್ಕ್
ಬೋಳಿಯಾರ್: ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಲಾರಿ ರಸ್ತೆಗೆ ಅಡ್ಡವಾಗಿ ಮಗುಚಿಬಿದ್ದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಇಂದು ಮುಂಜಾನೆ ವೇಳೆ ಸಂಭವಿಸಿದೆ.
ಮೆಲ್ಕಾರಿನಿಂದ ಕೊಣಾಜೆ ಕಡೆಗೆ ಮರದ ಲೋಡನ್ನು ಸಾಗಾಟ ನಡೆಸುತ್ತಿದ್ದ ಲಾರಿ ಎದುರಿನಲ್ಲಿದ್ದ ಟ್ಯಾಂಕರ್ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದಿದೆ. ಘಟನೆಯಿಂದ ಮೆಲ್ಕಾರ್ ಮುಡಿಪು ಕಡೆಗೆ ಚಲಿಸುವ ವಾಹನಗಳಿಗೆ ಕೆಲಕಾಲ ಅಡ್ಡಿಯುಂಟಾಯಿತು. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಾರಿ ಕ್ರೇನ್ ಮೂಲಕ ಮೇಲೆತ್ತಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.