ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕುಂಪಲ: 108 ದಿನಗಳ ಭಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಭಜನೆ ಕುರಿತ ಜಾಗೃತಿಯನ್ನು ಹಮ್ಮಿಕೊಂಡಿರುವ ಕ್ಷೇತ್ರದ ಕಾರ್ಯ ಸಂಸ್ಕøತಿಯನ್ನು ಉಳಿಸುವಂತಹದ್ದು, ಭಜನೆಯಿಂದ ಎಂದಿಗೂ ವಿಭಜನೆಯಿಲ್ಲ ಎಂದು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮನೆಗಳಲ್ಲಿ ಭಜನೆ ಮಾಡುವ ಸಂಸ್ಕøತಿಯೇ ನಶಿಸಿ ಹೋಗುತ್ತಿದೆ. ಈ ನಡುವೆ 108 ದಿನಗಳ ಭಜನೆಯನ್ನು ನೆರವೇರಿಸುವ ಮೂಲಕ ಭಜನೆ ಕುರಿತ ಜಾಗೃತಿ ಮೂಡಿಸುವ ಕಾರ್ಯ ಶ್ರೀ ಕ್ಷೇತ್ರ ಮುಖ್ಯಪ್ರಾಣದಿಂದ ಆಗಿದೆ. ಇದರಿಂದ ಭಕ್ತರು ಭಜನೆಯಲ್ಲಿನ ಜಾಗೃತಿಯನ್ನು ಹೆಚ್ಚಿಸಿಕೊಂಡು ಮನೆಗಳಲ್ಲಿ ಭಜನೆಗಳನ್ನು ಆರಂಭಿಸುವ ಮೂಲಕ ಯುವಪೀಳಿಗೆಯನ್ನು ಉತ್ತಮ ಸಂಸ್ಕøತಿಯಲ್ಲಿ ಬೆಳೆಸುವಂತಾಗಬೇಕು ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್, ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿಗಮದ ಕೃಪಾ ಅಮರ್ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ.ಡಿ.ಎಸ್.ಗಟ್ಟಿ, ಕೊಲ್ಯ ನಾಗಬ್ರಹ್ಮ ಸ್ಥಾನದ ಅಧ್ಯಕ್ಷ ಸುಶಾಂತ್ ಭಂಡಾರಿ, ಉದ್ಯಮಿಗಳಾದ ಪುರುಷೋತ್ತಮ ಕೊಟ್ಟಾರಿ, ನಿರ್ದೇಶಕ ಲೀಲಾಕ್ಷ ಕರ್ಕೇರ, ಅದ್ಯಪಾಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ್ ಭಂಡಾರಿ, ಚಿತ್ರನಟ ರೂಪೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಗೌರಾವಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಗೌರವ ಸಲಹೆಗಾರ ದೇವೇಶ್ ಸರಳಾಯ, ಕ್ಷೇತ್ರದ ಉಪಾಧ್ಯಕ್ಷ ರಾಜೇಶ್ ಪೂಜಾರಿ, ಕೋಶಾಧಿಕಾರಿ ಪ್ರಕಾಶ್ ಸಿಂಫೋನಿ, ಜತೆ ಕಾರ್ಯದರ್ಶಿ ಸತೀಶ್ ದೀಪಂ, ಪ್ರವೀಣ್ ಚಂದ್ರ ನಾಯಕ್, ವಸಂತ ಉಳ್ಳಾಲ್, ಅನಂತಕೃಷ್ಣ ಯಾದವ್, ಪ್ರಶಾಂತ್ ಕಾಪಿಕಾಡು, ಮೋಹನ್ ಸೇವಂತಿಗುಡ್ಡೆ, ಗೌರವಾಧ್ಯಕ್ಷೆ ಸುಷ್ಮಾ ಜನಾರ್ದನ್ ಉಪಸ್ಥಿತರಿದ್ದರು.
ಡ್ರಾಮ ಜ್ಯೂನಿಯರ್ಸ್ ಬಾಲ ಕಲಾವಿದೆ ಚಿತ್ರಾಲಿ, ಕನ್ನಡ ಚಿತ್ರರಂಗದ ಹಾಸ್ಯನಟರಾದ ಬ್ಯಾಂಕ್ ಜನಾರ್ದನ್, ಟೆನ್ನಿಸ್ ಕೃಷ್ಣ, ರಾಜಗೋಪಾಲ್, ಚಿತ್ರನಟ ರೂಪೇಶ್ ಶೆಟ್ಟಿ ಹಾಗೂ ಜ್ಯೂನಿಯರ್ ವಿಷ್ಣುವರ್ಧನ್ ಖ್ಯಾತಿಯ ರಾಜಗೋಪಾಲ್ ಇವರನ್ನು ಸನ್ಮಾನಿಸಲಾಯಿತು. ಇವರ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಕ್ಷೇತ್ರದ ಅಧ್ಯಕ್ಷ ದಿನೇಶ್ ರೈ ಉಳ್ಳಾಲಗುತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಕಿಶೋರ್ ಕುಜುಮಗದ್ದೆ ವಂದಿಸಿದರು .