ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಕೊಣಾಜೆ ಪೊಲೀಸ್ ಪೇದೆ ಆದರ್ಶ್ ಎಂಬವರಿಗೆ ಕಪಾಲಮೋಕ್ಷ ಮಾಡಿ ಹಲ್ಲೆಗೈದ ನಟೋರಿಯಸ್ ಆರೋಪಿ ಸೇರಿದಂತೆ ಇಬ್ಬರನ್ನು ಉರ್ವ ಪೊಲೀಸರು ಮಂಗಳೂರಿನಿಂದ ಬುಧವಾರ ಸಂಜೆ ವಶಕ್ಕೆ ಪಡೆದುಕೊಂಡಿದ್ದು, ಈರ್ವರು ಉರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಐತಪ್ಪ ಅವರಿಗೂ ಹಲ್ಲೆ ನಡೆಸಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರತ್ಕಲ್ ಕಾಟಿಪಳ್ಳದ ಶಮೀರ್ (28) ಮತ್ತು ಸುರತ್ಕಲ್ ಕಾನ ನಿವಾಸಿ ಮಹಮ್ಮದ್ ನಿಯಾಝ್ (20) ಬಂಧಿತರು. ಇಬ್ಬರು ಪೊಲೀಸರ ಮೇಲೆ ದಾಳಿ ನಡೆಸುವ ಸಂದರ್ಭ ಬಳಸಿದ ಯಮಹಾ ಆರ್15 ಬೈಕನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪಿಎಫ್‍ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪ್ರಕರಣದಿಂದ ಪ್ರಚೋದನೆಗೊಂಡ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಆರೋಪಿ ಶಮೀರ್ ಯಮಹಾ ಬೈಕಿನಲ್ಲಿ ಬೋಳಿಯಾರ್ ಕಡೆಗೆ ಬರುವ ಸಂದರ್ಭ ಆಯತಪ್ಪಿ ಮಾರ್ಗ ಮಧ್ಯೆಯಿದ್ದ ಹೊಂಡಕ್ಕೆ ಬಿದ್ದಿದ್ದ. ಮಾನವೀಯತೆ ಮೆರೆದ ಸ್ಥಳೀಯರು ಮತ್ತು ಸ್ಥಳದಲ್ಲಿ ಬಂದೋಬಸ್ತಿನಲ್ಲಿ ಪೇದೆ ಆದರ್ಶ್ ಸಹಾಯಕ್ಕೆ ನಿಂತು ಶಮೀರ್ ನನ್ನು ಮೇಲಕ್ಕೆ ಎತ್ತಿದ್ದರು. ಬೈಕಿನಲ್ಲಿ ಕುಳಿತ ಬಳಿಕ ಪೇದೆ ಆದರ್ಶ್ ಅವರಿಗೆ ಕಪಾಳಕ್ಕೆ ಹೊಡೆದ ಕಿರಾತಕ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮತ್ತೆ ಶಮೀರ್ ಮತ್ತು ನಿಯಾಝ್ ಸೇರಿಕೊಂಡು ಅದೇ ಬೈಕಿನಲ್ಲಿ ಉರ್ವ ಸಮೀಪ ಗಸ್ತಿನಲ್ಲಿದ್ದ ಉರ್ವ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಐತಪ್ಪ ಅವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಪ್ರವೃತ್ತರಾದ ಉರ್ವ ಪೊಲೀಸರು ಇಬ್ಬರನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ನಟೋರಿಯಸ್ ; ಆರೋಪಿ ಸಮೀರ್ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಂಟು ಪ್ರಕರಣಗಳಿವೆ. ದೇರಳಕಟ್ಟೆ ವಿದ್ಯಾರ್ಥಿನಿ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿಯೂ ಈತ ಆರೋಪಿಯಾಗಿದ್ದ. ನಟೋರಿಯಸ್ ಅನಿಸಿಕೊಂಡಿರುವ ಈತನ ಜತೆಗಿದ್ದ ಶಮೀರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳಿವೆ.