Site icon Ullalavani

ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ:ಇಬ್ಬರ ಬಂಧನ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕಿನ್ಯಾ: ಆಡಿನ ವಿಚಾರಕ್ಕೆ ಸಂಬಂಧಿಸಿ ವೃದ್ಧ ದಂಪತಿ ಸೇರಿದಂತೆ ಪುತ್ರನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕಿನ್ಯಾ ಬೆಳರಿಂಗೆ ನಿವಾಸಿ ಜನಾರ್ದನ್ ಆಳ್ವ ( 70) , ಪತ್ನಿ ಪುಷ್ಪಾವತಿ (52) ಹಾಗೂ ಅವರ ಪುತ್ರ ಅಜಿತ್ ( 30) ಎಂಬವರ ಮೇಲೆ ನೆರೆಮನೆಯ ಇಬ್ಬರು ಸಹೋದರರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಂತೆ ಆರೋಪಿಗಳಾದ ಕಿನ್ಯಾ ಬೆಳರಿಂಗೆಯ ಸಫಾಕ್ (22) ಮತ್ತು ಶಕೀಲ್ (21) ಎಂಬ ಸಹೋದರರನ್ನು ಬಂಧಿಸಲಾಗಿದೆ.

ಹಮೀದ್ ಎಂಬವರಿಗೆ ಸೇರಿದ ಆಡು ನೆರೆಮನೆಯ ಜನಾರ್ದನ್ ಆಳ್ವ ಅವರ ಗಿಡಗಳನ್ನು ತಿಂದು ಹಾನಿ ಮಾಡುತ್ತಿತ್ತು. ಈ ಬಗ್ಗೆ ಹಮೀದ್ ಅವರಲ್ಲಿ ಕಟ್ಟಿಹಾಕುವಂತೆ ಒತ್ತಾಯಿಸಿದ್ದರೂ ಅವರು ಕೇಳದೇ , ಮತ್ತೆ ಆಡು ಮೇಯಲು ಬಿಟ್ಟಿದ್ದರು. ಪರಿಣಾಮ ಮತ್ತೆ ಗಿಡಗಳನ್ನು ತಿಂದಾಗ ನೊಂದ ಪುಷ್ಪಾವತಿ ಅವರು ಆಡನ್ನು ಹೊಡೆದೋಡಿಸಿದ್ದರು. ಇದರ ಪ್ರತೀಕಾರವಾಗಿ ಹಮೀದ್ ಅವರ ಪುತ್ರರಿಬ್ಬರು ಸೇರಿಕೊಂಡು ದುಷ್ಕøತ್ಯ ಎಸಗಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಜಮಾಯಿಸಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆರೋಪಿಗಳ ಬಂಧನದಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.

Exit mobile version