ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮುಡಿಪು: ಎಲ್ಲರೂ ಚಲನಚಿತ್ರವನ್ನು ನೋಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಸಿನಿಮಾಗಳನ್ನು ಮಾತ್ರ ನೋಡದೆ ಕೆಟ್ಟ ಸಿನಿಮಾಗಳನ್ನು ಕೂಡಾ ನಾವು ನೋಡಬೇಕು. ಕೆಲವರಿಗೆ ಇಷ್ಟವಾಗದ್ದು ನಮಗೆ ಇಷ್ಟವಾಗಬಹುದು. ಅಥವಾ ಸಿನಿಮಾವು ಎಲ್ಲಿ ಎಡವಿದೆ ಎಂಬ ಪರಾಮರ್ಷೆಯನ್ನು ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ತುಳು ಚಲನಚಿತ್ರ ನಿರ್ದೇಶಕ ಡಾ.ರಿಚರ್ಡ್ ಕ್ಯಾಸ್ಟಲಿನೋ ಅವರು ಅಭಿಪ್ರಾಯಪಟ್ಟರು
ಇಂದು ತಂತ್ರಜ್ಞಾನದ ಯುಗವಾಗಿದ್ದು ಸಿನಿಮಾ ರಂಗದಲ್ಲೂ ನಾವು ಸಾಕಷ್ಟು ಆಧುನಿಕತೆ ಮತ್ತು ಬದಲಾವಣೆಗಳಾಗಿರುವುದನ್ನು ಗಮನಿಸಬಹುದು. ಸಿನಿಮಾ ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಾಗಬೇಕು. ವಿದ್ಯಾರ್ಥಿ ಜೀವನದಲ್ಲೇ ನಾವು ಸಿನಿಮಾ ರಂಗದ ಹಲವು ಮಗ್ಗುಲುಗಳನ್ನು ಅರಿತುಕೊಂಡರೆ ಮುಂದಿನ ದಿನಗಳಲ್ಲಿ ನಾವು ಕೂಡಾ ಈ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಅವಕಾಶವಾಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥೆ ಡಾ.ವಹಿದಾ ಸುಲ್ತಾನ ಅವರು ವಹಿಸಿದ್ದರು. ವಿಭಾಗದ ಪ್ರಾಧ್ಯಾಪಕ ಪ್ರೊ.ಶಿವರಾಮ್ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಿಕ ಮಜಿದ್ ಮಜಿದಿ ನಿರ್ದೇಶನದ ಇರಾನಿಯನ್ ಚಲನಚಿತ್ರ `ಬರಾನ್’ ಪ್ರದರ್ಶನಗೊಂಡಿತು. ಶುಕ್ರವಾರದಂದು ತಮಿಳು ಚಲನಚಿತ್ರ `ಕಾಕಾ ಮುತ್ತೈ’ ಪ್ರದರ್ಶನಗೊಳ್ಳಲಿದೆ.