Site icon Ullalavani

ಮಾ.22 ನುಸ್ರತುಲ್ ಮಸಾಕೀನ್ ಉಚಿತ ಸಾಮೂಹಿಕ ವಿವಾಹ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಕಲ್ಲಾಪು: ಅಳೇಕಲದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾ.22 ರಂದು ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ 7 ಜತೆ ಬಡ ಹೆಣ್ಣು ಮಕ್ಕಳಿಗೆ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಟ್ರಸ್ಟಿನ ಸದಸ್ಯ ಕೆಎಂಕೆ ಮಂಜನಾಡಿ ಹೇಳಿದರು.

                                                                     ಸಾಂದರ್ಭಿಕ ಚಿತ್ರ

ತೊಕ್ಕೊಟ್ಟು ಅಳೇಕಲದ ಟ್ರಸ್ಟ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಳೆದ 4 ವರ್ಷಗಳಿಂದ 40 ಜತೆ ಉಚಿತ ಸಾಮೂಹಿಕ ವಿವಾಹವನ್ನು ಟ್ರಸ್ಟ್ ನೆರವೇರಿಸಿದೆ. ಈ ವರ್ಷ 10 ಜತೆ ಉಚಿತ ಸಾಮೂಹಿಕ ವಿವಾಹ ಮಾಡುವ ಯೋಜನೆಯನ್ನು ಹಾಕಿತ್ತು. ಆದರೆ ಆಯ್ಕೆ ಸಂದರ್ಭ 7 ಕುಟುಂಬಗಳು ಮಾತ್ರ ಆಯ್ಕೆ ಮಾಡಲಾಗಿದೆ. ಮುಂದಿನ 3 ಜತೆ ವಿವಾಹವನ್ನು ಬಡ ಹೆಣ್ಮಕ್ಕಳನ್ನು ಹುಡುಕಿ ರಂಝಾನ್ ನಂತರ ಅವರವರ ಮನೆಗಳಲ್ಲಿ ನಡೆಸಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ವಿವಾಹವಾದವರು ಸುಖಮಯ ಜೀವನ ನಡೆಸುತ್ತಿದ್ದಾರೆ. ಟ್ರಸ್ಟ್ ಎಲ್ಲಾ ಧರ್ಮದಲ್ಲಿರುವ ಕಡುಬಡವರನ್ನು ಗುರುತಿಸಿ ಅವರಿಗೆ ಮಾಸಿಕ ರೇಷನ್ ವಿತರಣೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ, ಬಡವರಿಗೆ ಗೃಹ ನಿರ್ಮಾಣ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ ಹಾಗೂ ಶಾಲಾ ಫೀಸ್ ನ್ನು ವಿತರಿಸುವ ಮೂಲಕ ಜನಪರ ಕಾಳಜಿಯೊಂದಿಗೆ ಕಾರ್ಯ ನಿರ್ವಹಿಸಿದೆ.

ಸಾಮೂಹಿಕ ವಿವಾಹ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರಿನ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ ಮಹಮ್ಮದ್ ಶಮೀಂ ಸಖಾಫಿ ದುಆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಯ್ಯದ್ ಯಹ್ಯಾ ತಂಙಳ್, ಯೂಸುಫ್ ಮಿಸ್ಬಾಹಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಮೊಯ್ದೀನ್ ಬಾವಾ, ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ , ಸ್ಥಳೀಯ ಚರ್ಚಿನ ಧರ್ಮಗುರು ಬ್ಯಾಪ್ಟಿಸ್ಟ್ ಸಲ್ದಾನ, ಮಹಮ್ಮದ್ ಮಸೂದ್, ಚಂದ್ರಹಾಸ್ ಉಳ್ಳಾಲ್, ಕೋಡಿಜಾಲ್ ಇಬ್ರಾಹಿಂ ಮೊದಲಾದವರು ಭಾಗವಹಿಸಲಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಟ್ರಸ್ಟಿನ ಉಪಾಧ್ಯಕ್ಷ ಯು.ಎಸ್.ಹನೀಫ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ಮಹಮ್ಮದ್, ಕೋಶಾಧಿಕಾರಿ ಯು.ಎಂ.ಜಬ್ಬಾರ್, ಯು.ಹೆಚ್.ಸಿದ್ಧೀಖ್ ಉಪಸ್ಥಿತರಿದ್ದರು.

ಉಳ್ಳಾಲ; ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟಿನ ಆಶ್ರಯದಲ್ಲಿರುವ ಉಳ್ಳಾಲದ ಸರೋಜ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಶ್ರೀ ವಿನಾಯಕ ಬಯೋಮೆಡಿಕಲ್ಸ್ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹೆ ಶಿಬಿರ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ಮತ್ತು ಮಕ್ಕಳ ತಪಾಸಣೆ ಶಿಬಿರ ಭಾನುವಾರ ನಡೆಯಿತು.

ಕನ್ನಡ ಚಿತ್ರರಂಗದ ಹಾಸ್ಯನಟ ಟೆನ್ನಿಸ್ ಕೃಷ್ಣ ಶಿಬಿರ ಉದ್ಘಾಟಿಸಿದರು. ಪೊಲೀಸ್ ಅಧಿಕಾರಿ ಶಿವಪ್ರಕಾಶ್, ಜೆನರಲ್ ಫಿಸಿಶಿಯನ್ ಡಾ.ರಾಘವೇಂದ್ರ ಭಟ್, ಮಕ್ಕಳ ತಜ್ಞ ಸ್ವಾತಿ.ಯಸ್.ರಾವ್, ಮಾಯಾ ಹೊಟೇಲಿನ ಹರೀಶ್ ಮುಖ್ಯ ಅತಿಥಿಗಳಾಗಿದ್ದರು.

ದೀಪಾ ಮಲ್ಯ ಸ್ವಾಗತಿಸಿದರು. ಶ್ವೇತಾ ಪೈ ಕಾರ್ಯಕ್ರಮ ನಿರ್ವಹಿಸಿದರು. ಸುಧಾಕರ್ ಕುದ್ರೋಳಿ ವಂದಿಸಿದರು.

ಈ ವೇಳೆ ಮಿಮಿಕ್ರಿ ಕಲಾವಿದ ರೆಹಮಾನ್ ಕೊಣಾಜೆ ಇವರನ್ನು ಸನ್ಮಾನಿಸಲಾಯಿತು.

Exit mobile version