Site icon Ullalavani

ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂಗ್ಲಿಷ್ ಅಧ್ಯಯನ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಶಿಕ್ಷಣಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಕೆಯ ರೂಪದಲ್ಲಿ ಅಧ್ಯಯನ ಮಾಡುವ ಮೂಲಕ ಎಲ್ಲರಿಗೂ ಶಿಕ್ಷಣವನ್ನು ನೀಡುವ ಕೆಲಸವನ್ನು ತಾಜುಲ್ ಉಲಮಾರವರು ಮಾಡಿದ್ದರು ಎಂದು ಕೇರಳ ಎಸ್ ಎಂಎ ಉಪಾಧ್ಯಕ್ಷ ಮಹಮ್ಮದ್ ಕುಂಞÂ ಸಖಾಫಿ ಕೊಲ್ಲಂ ಹೇಳಿದರು.

ಅವರು ಮುಹಿಮ್ಮಾತ್ ಮುಸ್ಲಿಮೀನ್ ಎಜುಕೇಶನಲ್ ಸೆಂಟರ್, ಎಸ್‍ವೈಎಸ್ ದೇರಳಕಟ್ಟೆ ಸೆಂಟರ್, ಎಸ್‍ಜೆಎಂ ದೇರಳಕಟ್ಟೆ ರೇಂಜ್ ಇದರ ಸಂಯುಕ್ತ ಆಶ್ರಯದಲ್ಲಿ ಮುಹಿಮ್ಮಾತ್ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬದ ಪ್ರಚಾರಾರ್ಥ ಈ ಶತಮಾನದ ಸಮುದಾರಕ ತಾಜು ಲ್ ಉಲಮಾ ಎಂಬ ವಿಚಾರದ ಕುರಿತು ಭಾನುವಾರ ದೇರಳಕಟ್ಟೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು.

ಸುನ್ನಿ ಸಮುದಾಯದ ಮತ್ತು ಭಾಷೆಗಳ ಏಳಿಗೆಗೆ ಬಹಳಷ್ಟು ಪ್ರೇರಣೆಯನ್ನು ತಾಜುಲು ಉಲಮಾ ನೀಡಿದ್ದರು. ಅವರ ಪ್ರೇರಣೆಯಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಮುಹಿಮ್ಮಾತ್ ಮೆನೇಜರ್ ಅಬ್ದುಲ್ ಖಾದಿರ್ ಸಖಾಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಹಾಫಿಳ್ ಸುಫ್‍ಯಾನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಯ್ಯದ್ ಶರಫುದ್ದೀನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ದುವಾ ನೆರವೇರಿಸಿದರು.

ಕೆ.ಕೆಎಂ ಕಾಮಿಲ್ ಸಖಾಫಿ, ಇಸ್ಮಾಯಿಲ್ ಸಅದಿ ಉರುಮಣೆ, ಎಸ್‍ಕೆ ಅಬ್ದುಲ್ ಖಾದರ್ ಹಾಜಿ, ಎಸ್‍ಎಂಎ ದ.ಕ. ಜಿಲ್ಲಾಧ್ಯಕ್ಷ ಕತ್ತರ್ ಬಾವಾ ಹಾಜಿ, ಕೆ.ಎಚ್. ಇಸ್ಮಾಯಿಲ್ ಸಅದಿ, ಸಿದ್ದೀಕ್ ಸಖಾಫಿ ಮೂಳೂರು, ದ.ಕ. ಜಿಲ್ಲಾ ಹಿಮಮೀಸ್ ಅಧ್ಯಕ್ಷ ಹೈದರ್ ಅಲಿ ಹಿಮಮಿ, ಕೆ.ಇ. ಸಾಲೆತ್ತೂರು, ದೇರಳಕಟ್ಟೆ ಗ್ರಾ.ಪಂ. ಉಪಾಧ್ಯಕ್ಷ ಸತ್ತಾರ್, ಸದಸ್ಯ, ಕಬೀರ್ ದೇರಳಕಟ್ಟೆ, ಏಷಿಯನ್ ಬಾವಾ ಹಾಜಿ, ಸುಲೈಮಾನ್ ಹಾಜಿ ಸಾಮಣಿಗೆ, ಖಾಲಿದ್ ಹಾಜಿ ಭಟ್ಕಳ, ಎಚ್.ಎಚ್. ಉಂಞÂ ಹಾಜಿ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಸೈ ಮೊದಲಾದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಚಯರ್ ಮ್ಯಾನ್ ಎ.ಎಂ ಇಸ್ಮಾಯಿಲ್ ಸಅದಿ ಬದ್ಯಾರ್ ಸ್ವಾಗತಿಸಿದರು.

Exit mobile version