ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮಾಡೂರು: ವಿಶ್ವಹಿಂದೂ ಪರಿಷತ್, ಬಜರಂಗದಳದ ಶ್ರೀ ಹರಿ ಶಾಖೆ ಮಾಡೂರು ಇದರ ವತಿಯಿಂದ ಮಾಡೂರು ಶ್ರೀ ಅಯ್ಯಪ್ಪ ಮಂದಿರದ ಅಯ್ಯಪ್ಪ ಸ್ವಾಮಿಗೆ ಬೆಳ್ಳಿಯ ಪೀಠ ಮತ್ತು ಪ್ರಭಾವಳಿಯನ್ನು ಶುಕ್ರವಾರ ಬೀರಿ ಸಿದ್ಧಿ ವಿನಾಯಕ ಮಂದಿರದಿಂದ ಮಾಡೂರು ಅಯ್ಯಪ್ಪ ಭಜನಾ ಮಂದಿರದವರೆಗೆ ಮೆರವಣಿಗೆಯ ಮೂಲಕ ತಂದು ಅಪಿ೯ಸಲಾಯಿತು.
ಮೆರವಣಿಗೆಯ ಉದ್ಘಾಟನೆಯನ್ನು ಕೊಲ್ಯ ಮೂಕಾಂಭಿಕಾ ದೇವಸ್ಥಾನದ ಅಧ್ಯಕ್ಷ ಮಧುಸೂಧನ್ ಅಯ್ಯರ್ ನೆರವೇರಿಸಿದರು.
ಈ ಸಂದರ್ಭ ಬಜರಂಗದ ದಳ ಪ್ರಾಂತ್ಯ ಸಂಯೋಜಕ ಶರಣ್ ಪಂಪ್‍ವೆಲ್, ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕುತ್ತಾರು, ಜಿಲ್ಲಾ ಸಹ ಸಂಚಾಲಕ ಗಣೇಶ್ ಕುಂಪಲ, ವಿಶ್ವ ಹಿಂದೂ ಪರಿಷತ್ತು ಉಳ್ಳಾಲ ಪ್ರಖಾಂಡದ ಕಾರ್ಯದರ್ಶಿ ರವಿ ಅಸೈಗೋಳಿ, ನಾರಾಯಣ ಕುಂಪಲ, ಪ್ರಖಾಂಡ ಸಂಚಾಲಕ ಪವಿತ್ರ ಕೆರೆಬೈಲು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನಾಗೇಶ್ ಕುಂಪಲ, ವಿಶ್ವನಾಥ್ ಕೊಲ್ಯ, ಮಂಗಳೂರು ವಿಧಾನ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುಜೀತ್ ಮಾಡೂರು, ಅಯ್ಯಪ್ಪ ಸೇವಾ ಟ್ರಸ್ಟ್ ನ ಪ್ರಮುಖರಾದ ಸುರೇಶ್ ಕೆ.ಪಿ, ಭಜರಂಗದಳ ಮಾಡೂರು ಘಟಕದ ಪ್ರಮುಖರಾದ ಅರ್ಜುನ್ ಮಾಡೂರು, ಸುಕುಮಾರ್ ಮಾಡೂರು, ಉಪಸ್ಥಿತರಿದ್ದರು.