Site icon Ullalavani

ತೊಕ್ಕೊಟ್ಟು ಮಸೀದಿಗೆ ಕಲ್ಲು: ಆರೋಪಿ ಸೆರೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ತೊಕ್ಕೊಟ್ಟು ರೈಲ್ವೇ ಹಳಿ ಸಮೀಪ ಇರುವ ಮಸೀದಿಗೆ ಕಿಡಿಗೇಡಿಯೋವ೯ ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಆರೋಪಿಯನ್ನು ಸಾವ೯ಜನಿಕರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ತೊಕ್ಕೊಟ್ಟು ಮಸ್ಜಿದುಲ್ ಹುದಾ ಮಸೀದಿಗೆ ಹಾನಿಯಾಗಿದೆ. ಮಸೀದಿಯ ಕಿಟಕಿಯ ಮೂರು ಗಾಜುಗಳು ಪುಡಿಯಾಗದೆ. ಮಸೀದಿಯೊಳಗೆ ಧಮ೯ ಗುರುಗಳು ಇರುವ ಸಂದಭ೯ ಒಳಪೇಟೆಯಿಂದಾಗಿ ರೈಲ್ವೇ ಕೆಳ ಸೇತುವೆ ಮೂಲಕ ಮಸೀದಿ ಹತ್ತಿರ ಬಂದ ಕಿಡಿಗೇಡಿ ಮೂರು ಕಲ್ಲುಗಳನ್ನು ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯನ್ನು ಮಸೀದಿಯೊಳಗಿದ್ದ ಧಮ೯ಗುರುಗಳು ನೋಡಿ ಕೆಳಗಿಳಿದು ಇತರರಲ್ಲಿ ವಿಷಯ ತಿಳಿಸಿದ್ದು, ಅವರು ಕಿಡಿಗೇಡಿಗೆ ಹುಡುಕಾಡಿದಾಗ, ಭಟ್ನಗರ ನಿವಾಸಿ ಗಾಂಜಾ ವ್ಯಸನಿ ಸಾಗರ್ ಪತ್ತೆಯಾಗಿದ್ದಾನೆ. ಈತನ ಕೈಯಿಂದ ಗಾಂಜಾ, ಕಲ್ಲು ಪತ್ತೆಯಾಗಿದ್ದು ಉಳ್ಳಾಲ ಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version