ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉತ್ತರಕರ್ನಾಟಕ ಮೂಲದ ಯುವತಿಯರು ನಿಗೂಢವಾಗಿ ನಾಪತ್ತೆಯಾಗುತ್ತಿದ್ದು, ಉಳ್ಳಾಲಕ್ಕೆಂದು ಕೆಲಸಕ್ಕೆ ಬಂದವರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹಳಿಯಾಳ ರಾಯಪಟ್ಟಣದಿಂದ ಉಳ್ಳಾಲದ ಕೈಕೋ ಸಮೀಪ ಕಂಪೆನಿಗೆ ಕೆಲಸಕ್ಕೆ ಬಂದು ನಾಪತ್ತೆಯಾದ ಯುವತಿಯನ್ನು ಹುಡುಕುತ್ತಾ ಶುಕ್ರವಾರ ಉಳ್ಳಾಲ ಪೊಲೀಸ್ ಠಾಣೆಗೆ ಯುವತಿ ಸಂಬಂಧಿಕರು ಹಾಗೂ ಸಾಮಾಜಿಕ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.
ಹೋಳಿಗೆ ಬಂದಿರಲಿಲ್ಲ :
ಉಳ್ಳಾಲದಲ್ಲಿ ಕೆಲಸ ಮಾಡುತ್ತಿದ್ದ ದೊಂಡಿ ಬಾಯಿ ಹೋಳಿಗೆ ಊರಿಗೆ ಬರುವವಳಿದ್ದಳು ಅದರೆ ಈಕೆ ಹೋಳಿ ಹಬ್ಬಕ್ಕೆ ಬಾರದೆ ಇದ್ದಾಗ ಮನೆಯವರು ದೂರವಾಣಿ ಕರೆ ಮಾಡಿದ್ದು, ದೂರವಾಣಿ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಸುನಿತಾಳಿಗೆ ಕರೆ ಮಾಡಿದಾಗ ಅಕೆಯೂ ಕರೆ ಸ್ವೀಕರಿಸದೇ ಇದ್ದಾಗ ಮನೆಯವರಿಗೆ ಆತಂಕ ಉಂಟಾಗಿದ್ದು, ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಲ್ಲಿನ ಪೊಲೀಸರ ಮಹಿತಿಯಂತೆ ಉಳ್ಳಾಲ ಪೊಲೀಸರ ಮೊರೆ ಹೋಗಿದ್ದಾರೆ. ಈ ನಡುವೆ ದೊಂಡಿಬಾಯಿ ತನ್ನ ಸಹೋದರನಿಗೆ ಮೊಬೈಲ್ ಮೆಸೇಜು ಮಾಡಿದ್ದು, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಮೆಸೇಜ್ ಹಾಕಿದ್ದು, ಇದರಿಂದ ಅತಂಕಿತರಾದ ಈಕೆಯ ಸಂಬಂಧಿಕರು ಉಳ್ಳಾಲದಲ್ಲಿ ಈಕೆಯ ಹುಡುಕಾಟದಲ್ಲಿ ತೊಡಗಿದ್ದಾರೆ.
ಈಕೆಯನ್ನು ಕರೆದುಕೊಂಡು ಬಂದಿರುವ ಏಜೆಂಟ್ ಸುನಿತಾ ಕರೆ ಸ್ವೀಕರಿಸದೇ ಇದ್ದಾಗ ದೊಂಡಿಬಾಯಿ ನಾಪತ್ತೆಯಲ್ಲಿ ಈಕೆಯ ಕೈವಾಡ ಶಂಕಿಸಲಾಗಿದ್ದು, ಇದೇ ರೀತಿ ಯುವತಿಯರನ್ನು ಉತ್ತರ ಕರ್ನಾಟಕದಿಂದ ಕರೆದುಕೊಂಡು ಬಂದು ಮಾರಾಟ ಮಾಡಿರುವ ಸಾಧ್ಯತೆಗಳಿವೆ ಎಂದು ಸಿದ್ಧಿ ಜನಾಂಗದ ಸಾಮಾಜಿಕ ಕಾರ್ಯಕರ್ತ ಮ್ಯಾನುವೆಲ್ ಸಿದ್ಧಿ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.