ಉಳ್ಳಾಲ: ಮಲ್ಪೆ ಮತ್ತು ಮಂಗಳೂರು ಮೀನುಗಾರಿಕೆ ಬಂದರುಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕಾಗಿ 75 ಮೀ. ಉದ್ದದವರೆಗೆ ಜಟ್ಟಿ ವಿಸ್ತರಣೆ ಇದು ಈ ಸಾಲಿನ ಬಜೆಟಿನ ಮುಖ್ಯಾಂಶಗಳು
ಮೀನುಗಾರರ ಸಹಕಾರ ಸಂಘಗಳಿಗೆ ತಮ್ಮ ಸ್ವಂತ ನಿವೇಶನದಲ್ಲಿ ಕನಿಷ್ಠ 500 ಚದರಡಿಯ ಮೀನು ಸಂಗ್ರಹಣೆ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಿಸಲು ಶೇ. 75 ರಷ್ಟು ಸಹಾಯಧನ ಹಾಗೂ ಘಟಕ ವೆಚ್ಚ 10 ಲಕ್ಷ ರೂ.; ಪ್ರಸಕ್ತ ಸಾಲಿನಲ್ಲಿ 20 ಕಟ್ಟಡಗಳ ನಿರ್ಮಾಣ, “ಮತ್ಸ್ಯ ಕೃಷಿ ಆಶಾ ಕಿರಣ” ಯೋಜನೆಯಡಿ ಪ್ರಮುಖ ಕೆರೆಗಳ 2,500 ಹೆಕ್ಟೆರ್ ಪ್ರದೇಶದಲ್ಲಿ ಹೆಕ್ಟೆರ್‍ಗೆ 4,000 ಬಲಿತ ಮೀನುಮರಿ ಹಾಗೂ 2 ಟನ್ ಕೃತಕ ಆಹಾರ ಖರೀದಿಗೆ ಘಟಕ ವೆಚ್ಚದ ಶೇ.50ರಷ್ಟು ಹಾಗೂ ಗರಿಷ್ಟ 27,000 ರೂ. ನೀಡಲು ಕ್ರಮ – 6.75 ಕೋಟಿ ರೂ. ಇನ್ನು ಕೃಷಿಕರಿಗೆ ಅವರ ಜಮೀನುಗಳಲ್ಲಿ ಕೊಳ ನಿರ್ಮಿಸಿ ಸಾಂದ್ರೀಕೃತ ಮೀನು ಕೃಷಿ ಕೈಗೊಳ್ಳಲು ಉತ್ತೇಜನ. ಹೂಡಿಕೆ ವೆಚ್ಚ ಸೇರಿದಂತೆ ಮೀನು ಕೊಳ ನಿರ್ಮಾಣದ ಘಟಕ ವೆಚ್ಚ 8.50 ಲಕ್ಷ ರೂ. ಹಾಗೂ ಗರಿಷ್ಠ 4.25 ಲಕ್ಷ ರೂ.ಗೆ ಒಳಪಟ್ಟು ಶೇ.50 ರಷ್ಟು ಸಹಾಯಧನ. ಕಡಲ ತೀರದ 3 ಜಿಲ್ಲೆಗಳಲ್ಲಿ 200 ಮಂಜುಗಡ್ಡೆ ಸ್ಥಾವರಗಳಿಗೆ ಹಾಗೂ 35 ಶೈತ್ಯಾಗಾರಗಳಿಗೆ ವಿದ್ಯುಚ್ಛಕ್ತಿ ಮೇಲೆ ನೀಡುವ ಸಹಾಯಧನ ಪ್ರತಿ ಯುನಿಟ್‍ಗೆ 1.75 ರೂ. ಗಳಿಗೆ ಹೆಚ್ಚಳ ಹಾಗೂ ಪ್ರತಿ ವರ್ಷ ಪ್ರತಿ ಸ್ಥಾವರಕ್ಕೆ ಇರುವ ಮಿತಿ 3.50 ಲಕ್ಷ ರೂ.ಗಳಿಗೆ ಹೆಚ್ಚಳ.- 6 ಕೋಟಿ ರೂ. “ಮತ್ಸ್ಯಾಶ್ರಯ ಯೋಜನೆ” ಅಡಿ 3000 ಫಲಾನುಭವಿಗಳ ಆಯ್ಕೆ, ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುದಾನ
ಅನ್ನಭಾಗ್ಯ ಯೋಜನೆಯಡಿಯಲ್ಲಿ ವ್ಯಕ್ತಿಗೆ 7ಕೆ.ಜಿ ಅಕ್ಕಿ:
ಅನ್ನಭಾಗ್ಯ ಯೋಜನೆ ಅಡಿ ನೀಡುತ್ತಿರುವ ಆಹಾರ ಧಾನ್ಯ ಪ್ರಮಾಣವನ್ನು ಪ್ರತಿ ವ್ಯಕ್ತಿಗೆ 7 ಕೆ.ಜಿ.ಗೆ ಏರಿಕೆ ಮಾಡಲಾಗುವ ಮೂಲಕ ಹೊಸ ಪಡಿತರ ಚೀಟಿಗಳನ್ನು ಇನ್ನು ಮುಂದೆ 15 ದಿನಗಳ ಒಳಗಾಗಿ ವಿತರಿಸುವ ಮೂಲಕ ಇನ್ನು ಮುಂದಿನ ದಿನಗಳಲ್ಲಿ ಹೊಸ ಪಡಿತರ ಚೀಟಿ ವಿತರಣೆ ಸೇವೆಯ ಮೂಲಕ 15 ದಿನಗಳೊಳಗಾಗಿ ಮನೆಬಾಗಿಲಿಗೆ ಸ್ಪೀಡ್ ಪೆÇೀಸ್ಟ್ ಮುಖಾಂತರ ಜಾರಿಗೊಳಿಸುವ ಬಗ್ಗೆ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ. ನಾರಿನಿಕೇತನ, ವೃದ್ಧಾಶ್ರಮ, ಅಂಧಮಕ್ಕಳ ಶಾಲೆ, ಬಡವಿದ್ಯಾರ್ಥಿಗಳ ವಿದ್ಯಾರ್ಥಿನಿಲಯ, ಭಿಕ್ಷುಕರ ಪುನರ್ವಸತಿ ಕೇಂದ್ರ ಮುಂತಾದವುಗಳಿಗೆ ಅನ್ನಭಾಗ್ಯ ಮಾದರಿ ಉಚಿತ ಆಹಾರ ಧಾನ್ಯ ಪೂರೈಕೆ.